Home » ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ ಮೂವರು‌ ಮಹಿಳೆಯರ ಬಂಧನ
 

ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ ಮೂವರು‌ ಮಹಿಳೆಯರ ಬಂಧನ

by Kundapur Xpress
Spread the love

ಪಡುಬಿದ್ರಿ : ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೆಜಮಾಡಿಯಲ್ಲಿ ನಡೆಯುತ್ತಿದ್ದ ನೇಮೋತ್ಸವದ ಸಮಯದಲ್ಲಿ ಮೂವರು ಮಹಿಳೆಯರು ಹೆಜಮಾಡಿ ನಿವಾಸಿಯಾದ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದ ಮೂವರು‌ ಮಹಿಳೆಯರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು ತಮಿಳುನಾಡಿನ ನಿವಾಸಿಗಳಾದ ಕಾಳಿಯಮ್ಮ, ಶೀಥಲ್ ಹಾಗೂ ಮಾರಿ ಎಂದು ಗುರುತಿಸಲಾಗಿದೆ.

ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಕದಿಯುವ ದೃಶ್ಯ ಸಿಸಿ ಟಿವಿಯಲ್ಲಿ ಸರೆಯಾಗಿತ್ತು.ಆ ದೃಶ್ಯ ಎಲ್ಲಾ ಕಡೆ ವೈರಲ್ ಆಗುತ್ತಿದಂತೆ ಪಡುಬಿದ್ರಿ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.ಪಡುಬಿದ್ರಿ ಎಸ್ ಐ ಶಕ್ತಿವೇಲು ಮತ್ತು ಅವರ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Related Articles

error: Content is protected !!