Home ಬ್ರೇಕಿಂಗ್ ನ್ಯೂಸ್ಅಂದರ್‌ ಬಾಹರ್‌ ಇಸ್ಪೀಟ್‌ ಜುಗಾರಿ ಆಟ

ಅಂದರ್‌ ಬಾಹರ್‌ ಇಸ್ಪೀಟ್‌ ಜುಗಾರಿ ಆಟ

by Kundapur Xpress

ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ಐ.ಆರ್‌ ಗಡ್ಡೇಕರ್‌, ಪೊಲೀಸ್‌ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್‌ ಠಾಣೆ ಇವರಿಗೆ 74 ನೇ ಉಳ್ಳೂರು ಕಡೆ ಗಸ್ತಿನಲ್ಲಿರುವಾಗ ಬೆಳಿಗ್ಗೆ ಹಳ್ಳಿಹೊಳೆ ಗ್ರಾಮದ ರಾಮನ ಹಕ್ಲು ಎಂಬಲ್ಲಿ ಸರ್ಕಾರಿ ಹಾಡಿಯಲ್ಲಿ ಐದಾರು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್‌ ಬಾಹರ್‌ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಉಮೇಶ್‌ (26), ಹಳ್ಳಿಹೊಳೆ ಗ್ರಾಮ, ಬೈಂದೂರು,ಗಣೇಶ್‌ (34),ಹಳ್ಳಿಹೊಳೆ ಗ್ರಾಮ, ಬೈಂದೂರು, ಸಂತೋಷ (39), ಹಳ್ಳಿಹೊಳೆ ಗ್ರಾಮ, ಬೈಂದೂರು , ಸುರೇಂದ್ರ (29), ಹಳ್ಳಿಹೊಳೆ ಗ್ರಾಮ, ಬೈಂದೂರು , ರವಿ (41) ಎಂದು ಗುರುತಿಸಲಾಗಿದೆ.ಇಸ್ಪೀಟ್‌ ಜುಗಾರಿ ಆಟ್ಟಕ್ಕೆ ಬಳಸಿದ್ದ 2300/- ನಗದು ಹಾಗೂ ಇಸ್ಪೀಟ್‌ ಎಲೆಗಳು, ಹಸಿರು ಬಣ್ಣದ ಮೆಶ್‌ ಸ್ವಾದೀನಪಡಿಸಿಕೊಂಡಿರುವುದಾಗಿದೆ.

Related Articles