Home » ಮಹಿಳೆ ಕಳ್ಳಿಯರಿಬ್ಬರು : ಪೊಲೀಸರಿಂದ ಬಂಧನ
 

ಮಹಿಳೆ ಕಳ್ಳಿಯರಿಬ್ಬರು : ಪೊಲೀಸರಿಂದ ಬಂಧನ

by Kundapur Xpress
Spread the love

ಉಡುಪಿ : ಅಂಬಲಪಾಡಿಯ ದೇವಸ್ಥಾನದಲ್ಲಿ ನವರಾತ್ರಿಯ ಸಡಗರದಲ್ಲಿದ್ದಾಗ ವೃದ್ಧ ಮಹಿಳೆಯೊಬ್ಬರ ಸರವನ್ನು ಕಳ್ಳಿಯರಿಬ್ಬರು ಕದ್ದಿದ್ದಾರೆ. ಸಂಶಯಗೊಂಡು ಮಹಿಳೆಯರನ್ನು ಪರಿಶೀಲಿಸಿದಾಗ ಸರ ಪತ್ತೆಯಾಗಿದೆ. ಈ ಬಗ್ಗೆ ಕೋಪಗೊಂಡ ಸಾರ್ವಜನಿಕ ಮಹಿಳೆಯರು ಆಪಾದಿತ ಮಹಿಳೆಯರಿಗೆ ಹಲ್ಲೆ ನಡೆಸಲು ಮುಂದಾಗಿದ್ದು, ವಿಶುಶೆಟ್ಟಿಯವರು ಮಹಿಳೆಯರನ್ನು ರಕ್ಷಿಸಿದ್ದಾರೆ.ಪೆಟ್ಟು ತಿಂದ ಮಹಿಳೆಯರು ಪೋಲಿಸರಿಗೆ ಒಪ್ಪಿಸುವ ಸಂದರ್ಭದಲ್ಲಿ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ. ತದನಂತರ ವಿಶುಶೆಟ್ಟಿಯವರು ಆಪಾದಿತ ಮಹಿಳೆಯರನ್ನು ತನ್ನ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೋಲಿಸರಿಗೆ ಒಪ್ಪಿಸಿರುತ್ತಾರೆ. ಆಪಾದಿತ ಮಹಿಳೆಯರು ತಮಿಳುನಾಡು ಮೂಲದವರೆಂಬ ಮಾಹಿತಿ ಇದೆ.

 

Related Articles

error: Content is protected !!