83
ಕೋಟ: ಮನೆಯ ಹಿಂಬದಿಯ ಹಂಚು ಕಿತ್ತು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಕನ್ನುಕೆರೆಯ ಶರತ್ ಎಂಬುವರ ಮನೆಯಲ್ಲಿ ನಡೆದಿದೆ.
ಶರತ್ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ಬೆಳಿಗ್ಗೆ ಏಳುವಾಗ ಯಾರೋ ಕಳ್ಳರು ಮನೆಯ ಮಾಡಿನ ಹಂಚನ್ನು ತೆಗೆದು ಮನೆ ಒಳಪ್ರವೇಶಿಸಿ ಗೋದ್ರೇಜ್ ನಲ್ಲಿದ್ದ ಕೀ ಯನ್ನು ಬಳಸಿ ಗೋದ್ರೇಜ್ ನ ಒಳಗಡೆ ಇಟ್ಟಿದ್ದ ರೂಪಾಯಿ 18,000/- ನಗದು, 3 ಗ್ರಾಂ ತೂಕದ ಒಂದು ಚಿನ್ನದ ಉಂಗುರ ಹಾಗೂ ಮಗುವಿನ ಬೆಳ್ಳಿಯ ಬಳೆ, ಕಾಲುಂಗುರ , ಸೊಂಟದ ಉಡಿದಾರ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

