Home ಬ್ರೇಕಿಂಗ್ ನ್ಯೂಸ್ಪತಿಯೊಂದಿಗೆ ಜಗಳ : ಆತ್ಮಹತ್ಯೆಗೆ ಯತ್ನಿಸಲು ಹೋದ ಪತ್ನಿಯ ರಕ್ಷಣೆ

ಪತಿಯೊಂದಿಗೆ ಜಗಳ : ಆತ್ಮಹತ್ಯೆಗೆ ಯತ್ನಿಸಲು ಹೋದ ಪತ್ನಿಯ ರಕ್ಷಣೆ

by Kundapur Xpress

ಕುಂದಾಪುರ : ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿಕೊಂಡು ಹಾಲಾಡಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮನೆ ಬಿಟ್ಟು ಹೋದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 01 ರoದು ವರದಿಯಾಗಿದೆ.

ಕೂಡಲೇ ಪತಿ ಈ ಬಗ್ಗೆ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿರುತ್ತಾರೆ.
ಸದ್ರಿ ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ತುರ್ತು ಸ್ಪಂದನಾ ವಾಹನದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೊಂದವರನ್ನು ಹಾಲಾಡಿ ಹೊಳೆಯ ಸೇತುವೆಯ ಮೇಲೆ ಪತ್ತೆಮಾಡಿ ಅವರನ್ನು ತಡೆದು, ಸಮಾಧಾನಪಡಿಸಿ, ತದನಂತರ ಅವರ ಪತಿಯನ್ನು ಸ್ಥಳಕ್ಕೆ ಕರೆಸಿ, ಇಬ್ಬರಿಗೂ ಸೂಕ್ತ ಬುದ್ಧಿವಾದ ಹಾಗೂ ಸಮಾಲೋಚನೆ ನಡೆಸಿರುತ್ತಾರೆ.

Related Articles