Home » ಸೂರಜ್‌ ರೇವಣ್ಣ ವಿಚಾರಣೆ, ಬಂಧನ
 

ಸೂರಜ್‌ ರೇವಣ್ಣ ವಿಚಾರಣೆ, ಬಂಧನ

by Kundapur Xpress
Spread the love

ಹಾಸನ : ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಮರುದಿನವೇ ಆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಹಾಸನ ‘ಸನ್’ (ಸೈಬರ್‌ಕ್ರೈಂ, ಆರ್ಥಿಕ ಅಪರಾಧ. ನಾರ್ಕೋಟಿಕ್ಸ್) ಪೊಲೀಸ್ ಠಾಣೆಯಲ್ಲಿ ಸೂರಜ್ ಅವರನ್ನು ಪೊಲೀಸರು ಶನಿವಾರ ಸಂಜೆಯಿಂದ ರಾತ್ರಿವರೆಗೆ 5 ತಾಸಿಗೂ ಹೆಚ್ಚು ಕಾಲ ವಿಚಾರಣೆಗೆ ಗುರಿಪಡಿಸಿದ್ದಾರೆ. ರೇವಣ್ಣ ಅವರು ತಮ್ಮ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತರೊಬ್ಬರು ಶನಿವಾರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಸೂರಜ್ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ, ದೂರುದಾರನ ವಿರುದ್ಧವೇ ಬ್ಲ್ಯಾಕ್ ಮೇಲ್ ಆರೋಪದ ದೂರು ನೀಡಲು ಸೂರಜ್ ಬಂದಿದ್ದು, ಈ ವೇಳೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ದೂರುದಾರ ತಮ್ಮ ಬಳಿ 5 ಕೋಟಿ ರು.ಗೆ ಬೇಡಿಕೆಯಿಟ್ಟುಕರೆ ಮಾಡಿದ್ದು, ಆ ಆಡಿಯೋ ತಮ್ಮ ಬಳಿ ಇದೆ ಎಂದು ಸೂರಜ್ ಆರೋಪಿಸಿದ್ದಾರೆ ಆದರೇ ಸೂರಜ್ ರೇವಣ್ಣ ಅವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ

   

Related Articles

error: Content is protected !!