Home » ಶ್ರೀ ಮೈಲಾರೇಶ್ವರ ಯುವಕ ಮಂಡಲ
 

ಶ್ರೀ ಮೈಲಾರೇಶ್ವರ ಯುವಕ ಮಂಡಲ

by Kundapur Xpress
Spread the love

ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಮೈಲಾರೇಶ್ವರ ಯುವಕ ಮಂಡಲವು ತನ್ನ 46ನೇ ವರ್ಷದ ಮಹಾ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷೀಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಪ್ರತಿ ವರ್ಷವೂ ತಿಂಗಳಿಗೊಂದರಂತೆ ಸಮಾಜಮುಖಿಯಾದ ಕಾರ್ಯಕ್ರಮದೊಂದಿಗೆ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವುದು ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪರಿಸರದ ಅಶಕ್ತರಿಗೆ ಸಹಾಯಹಸ್ತ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು 1963 ರಲ್ಲಿ ಮಿತ್ರ ಸಮಾಜ ದಿಂದ ಪ್ರಾರಂಭಗೊಂಡು ಶ್ರೀ ಮೈಲಾರೇಶ್ವರ ಯುವಕ ಮಂಡಲ ರಿ. ಎಂಬುದಾಗಿ 1976 ರಲ್ಲಿ ಮರುನಾಮಕರಣಗೊಂಡು ಸತತ 46 ವರ್ಷಗಳ  ಕಾಲ ಯುವಕ ಮಂಡಲವು ಸಕ್ರೀಯವಾಗಿರುದು ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಎನ್ನಬಹುದು

ಹಲವಾರು ವರ್ಷಗಳಿಂದ ಯುವಕ ಮಂಡಲದ ಸದಸ್ಯರಿಂದಲೇ ನಾಟಕ ಪ್ರದರ್ಶನವಾಗುತಿದ್ದು ಅನೇಕ ನಾಟಕಗಳು ಅನೇಕ  ಭಾರಿ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಈಗ ಇತಿಹಾಸ  ಬದಲಾದ ಕಾಲಘಟ್ಟದಲ್ಲಿ ಶಿವರಾತ್ರಿ ಮಹೋತ್ಸವದಂದು ವಿಭಿನ್ನ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದೆ

ಶ್ರೀ ಮೈಲಾರೇಶ್ವರ ಯುವಕ ಮಂಡಲದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನು ಇಟ್ಟುಕೊಂಡಂತಹ ಯುವಕ ಮಂಡಲದ ಮಾರ್ಗದರ್ಶಕರು ಹಾಗೂ ಈ ಭಾರಿಯ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೋ.ಶಿವಾನಂದ ಕಾರಂತರಿಗೆ ಆಹ್ವಾನ ಪತ್ರವನ್ನು ನೀಡಲು ಹೋದಾಗ ಅವರು ಹೇಳಿದಿಷ್ಟು……….

ಈ ಭಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಆದರೆ ನಾನು ಶ್ರೀ ಮೈಲಾರೇಶ್ವರ ಯುವಕ ಮಂಡಲದಲ್ಲಿ ಭಾರತವನ್ನು ನೋಡುತ್ತಿದ್ದೇನೆ ಎಂದು ಶುಭ ಹಾರೈಸಿದರು

     ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಮೈಲಾರೇಶ್ವರ ಯುವಕ ಮಂಡಲದ ವಾರ್ಷೀಕೋತ್ಸವಕ್ಕೆ

ಹಾರ್ದಿಕ ಶುಭ ಕೋರುವ

ಶ್ರೀಮತಿ ಮತ್ತು ಶ್ರೀ ಕೆ ಸೂರ್ಯಕಾಂತ್‌,

ಆದರ್ಶ ಇಂಜಿನಿಯರಿಂಗ್‌ ವರ್ಕ್ಸ್‌, ಕುಂದಾಪುರ

   

Related Articles

error: Content is protected !!