ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಯುವ ಜಾಗೃತಿ – ಬೃಹತ್ ವಿದ್ಯಾರ್ಥಿಸಮಾವೇಶವು ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಗುರುವಾರ ನಡೆಯಿತು. ಆ ಪ್ರಯುಕ್ತ ನಗರದ ಶಾಸ್ತ್ರಿ ಸರ್ಕಲ್ ನಿಂದ ಹೊರಟು ಹಳೆ ಬಸ್
ಸ್ಟಾಂಡ್ ಮಾರ್ಗವಾಗಿ ಆರ್.ಎನ್. ಶೆಟ್ಟಿ ಸಭಾಂಗಣದವರೆಗೆ ಬೃಹತ್ ಶೋಭಾಯಾತ್ರೆಯು ನಡೆಯಿತು.ಸಭಾ ಕಾರ್ಯಕ್ರಮವು ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಕೇಶವ ಬಂಗೇರ ವಿದ್ಯಾರ್ಥಿ ಪರಿಷತ್ತಿನ ಪರಿಕಲ್ಪನೆ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಗಳು ಯುವ ಸಮುದಾಯದ ಮೇಲೆ ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದನ್ನು ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ನೀಡಿದಂತಹ ಅನೇಕ ದೇಶಭಕ್ತರ ಉದಾಹರಣೆಗಳೊಂದಿಗೆ ತಿಳಿಸಿದರು ಹಾಗೂ ಇಂತಹ ಅದ್ದೂರಿಯ ಕಾರ್ಯಕ್ರಮವನ್ನು ಆಯೋಜಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರವನ್ನು ಅಭಿನಂದಿಸಿದರು.ಕಾರ್ಯಕ್ರಮದ ಉದ್ಘಾಟಕರಾದ ಗಣೇಶ್ ಕಿಣಿ ಬೆಳ್ವೆ ಅವರು ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ತಿಳಿಸಿದರು.ಶ್ರೀ ಸತೀಶ್ಚಂದ್ರ ಕಾಳಾವರ್ಕರ್ ರವರು ವಿವೇಕಾನಂದರ ಚಿಂತನೆಗಳ ಬಗ್ಗೆ ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜೇಶ್ ಶೆಟ್ಟಿ ಧರ್ಮೋತ್ಥಾನ ಸಂಸ್ಥೆ ಬೆಂಗಳೂರು ಇವರು ಮಾತನಾಡಿ ವಿವೇಕಾನಂದರ ಚಿಂತನೆಗಳ ಬಗ್ಗೆ ಯುವ ಮನಸ್ಸುಗಳಿಗೆ ತಿಳಿಸಿದರು. ರಾಹುಲ್ ಶೆಟ್ಟಿ ,ತಾಲೂಕು ಸಂಪರ್ಕ ಪ್ರಮುಖ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧನುಷ್ ಪೂಜಾರಿ ಸ್ವಾಗತ ಭಾಷಣವನ್ನು ಮಾಡಿ, ವಿಘ್ನೇಶ್ ಶೆಟ್ಟಿ , ಧನ್ಯವಾದ ಅರ್ಪಿಸಿದರು, ಬಿ.ಬಿ. ಹೆಗ್ಡೆ ಕಾಲೇಜಿನ ಅನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.