Home » ರಕ್ತದಾನದಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ
 

ರಕ್ತದಾನದಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ

ಸಂಸದ ಕೋಟ

by Kundapur Xpress
Spread the love

ಕುಂದಾಪುರ : ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ, ಗೆಳೆಯರ ಬಳಗ ಆನಗಳ್ಳಿ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ರಿಜಾಯ್ ಇವೆಂಟ್ ಗ್ರೂಪ್, ಹಾಗೂ ರಕ್ತ ನಿಧಿ ಕೆಎಂಸಿ ಆಸ್ಪತ್ರೆ ಮಣಿಪಾಲ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ
ಇವರ ಸಹಯೋಗದೊಂದಿಗೆ ಆನಗಳ್ಳಿಯಲ್ಲಿ ರಕ್ತದಾನ ಶಿಬಿರವನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು ಅವರು ಮಾತನಾಡಿ ರಕ್ತದಾನ ಮಹಾದಾನ, ಯುವ ತರುಣರೇ ಭಾರತೀಯ ಸಮಾಜದಲ್ಲಿ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ಒಂದೊಂದು ಹನಿ ರಕ್ತವು ಮೂರು ಜೀವವನ್ನು ಬದುಕಿಸುತ್ತದೆ, ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದರು. ಕರಾವಳಿ ಭಾಗದಲ್ಲಿ ದಾಖಲೆಯ ರಕ್ತದಾನ ಶಿಬಿರದ ಆಯೋಜನೆ ನೆರವೇರುತ್ತಿದ್ದು. ಈ ಶಿಬಿರದ  ಮಹತ್ಕಾಕಾರ್ಯಕ್ಕೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ರಕ್ತದಾನವು ಒಂದು ಉದ್ಧಾತ ಕಾರ್ಯವಾಗಿದೆ ರೋಗಿಗಳು ಜೀವ ಉಳಿಸಲು ಸಹಾಯಕವಾಗುತ್ತದೆ. ರಕ್ತದಾನ ಮಾಡುವುದರಿಂದ ವ್ಯಕ್ತಿಗೆ ಯಾವುದೇ ರೀತಿಯ ಹಾನಿಯಾಗದೆ. ಹಲವಾರು ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು. ಎಂದು ನುಡಿದರು
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಇದೇ ವೇಳೆ ಬಸ್ರೂರಿನ ಜನಪ್ರಿಯ ವೈದ್ಯರಾದ ಜಯ ನಂಬಿಯಾರ್ ಹಾಗೂ ಡಾ,ಶಮಿ ಶಾಸ್ತ್ರಿ ಪ್ರೊಫೆಸರ್ ಮತ್ತು ಹೆಡ್ ಕೆಎಂಸಿ ಆಸ್ಪತ್ರೆ ರಕ್ತ ನಿಧಿ ಘಟಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಡಾ.ನಾಗೇಶ್ ತಾಲೂಕು ಸರಕಾರಿ ಆಸ್ಪತ್ರೆ ಕುಂದಾಪುರ ಡಾ.ಶಮಿ ಶಾಸ್ತ್ರಿ, ಪ್ರೊಫೆಸರ್ ಮತ್ತು ಹೆಡ್ ಕೆಎಂಸಿ ಆಸ್ಪತ್ರೆ ರಕ್ತ ನಿಧಿ ಘಟಕ ಮಣಿಪಾಲ,ಜಯಕರ್ ಶೆಟ್ಟಿ ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ. ಸಿಂಚನ,ಎಸ್. ಪೂಜಾರಿ ದತ್ತಾಶ್ರಮ ಆದಿಶಕ್ತಿ ಮಠ ಆನಗಳ್ಳಿ. ಸತೀಶ್ ಸಾಲಿಯನ್ ಮಣಿಪಾಲ, ರಕ್ತದಾನದ ಆಪದ್ಬಾಂಧವ ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ,ಗಣೇಶ್.ಕೆ. ಅಧ್ಯಕ್ಷರು ಗೆಳೆಯರ ಬಳಗ ಆನಗಳ್ಳಿ ಭಾಸ್ಕರ್ ಬಿಲ್ಲವ ಹೇರಿಕುದ್ರು  ಸುಧೀರ್ ಕೆ.ಎಸ್.ಕುಂದಾಪುರ  ಶ್ರೀಮತಿ ಮೂಕಾಂಬು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ರಾಘವೇಂದ್ರ ಕಾಂಚನ್ ಮರವಂತೆ, ನಿರ್ವಹಿಸಿದರು. ಗೆಳೆಯರ ಬಳಗ ಸಂಸ್ಥೆಯ ಅಧ್ಯಕ್ಷ ಗಣೇಶ್ ಕೆ. ವಂದಿಸಿದರು.

   

Related Articles

error: Content is protected !!