ಕುಂದಾಪುರ : ಜೆ ಸಿ ಐ ಭಾರತದ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ-ವೈಭವ ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರದ ಪೂರ್ವ ಅಧ್ಯಕ್ಷರು,ಪೂರ್ವ ವಲಯ ಅಧಿಕಾರಿ ಹಾಗೂ ಕುಂದಾಪುರದ ಉದ್ಯಮಿಯಾಗಿರುವ ಶ್ರೀಯುತ ಎಸ್ ದಿನೇಶ್ ಗೋಡೆ ಇವರಿಗೆ ವಲಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಜೇಸಿ ಸಾಧನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಉದ್ಯೋಗ ಕ್ಷೇತ್ರದಲ್ಲಿ ಸತತ 36 ವರ್ಷಗಳ ಕಾಲದ ಪ್ರಾಮಾಣಿಕ ಹಾಗೂ ಜನಮನ್ನಣೆಯ ಸೇವೆಯನ್ನು ಗುರುತಿಸಿ ಹಾಗೂ ಜೆಸಿಐ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಸಂಸ್ಥೆಗೆ ನೀಡಿರುವ ಅನನ್ಯ ಕೊಡುಗೆಯನ್ನು ಶ್ಲಾಘಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವಲಯ 15 ರ ವಲಯ ಅಧ್ಯಕ್ಷರಾದ ಜೇಸಿಐ ಸೆನೆಟರ್ ಗಿರೀಶ್ ಎಸ್ ಪಿ, ವಲಯ 15ರ ವ್ಯವಹಾರ ವಿಭಾಗದ ನಿರ್ದೇಶಕ ಜೇಸಿ ಸುನಿಲ್ ಕುಮಾರ್, ಅಭಿವೃದ್ಧಿ ಹಾಗೂ ಬೆಳವಣಿಗೆ ವಿಭಾಗದ ನಿರ್ದೇಶಕರಾದ ಜೇಸಿ ರವಿಚಂದ್ರ ಪಾಟಾಳಿ,ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಪುರಂದರ ರೈ , ಜೇಸಿ ಮುರುಳಿ ಶ್ಯಾಮ್, ಜೇಸಿ ಅನಿಲ್ ಕುಮಾರ್, ಪೂರ್ವ ವಲಯ ಅಧ್ಯಕ್ಷ ಅಲನ್ ರೋಹನ್ ವಾಝ್, ಜೇಸಿಐ ಕುಂದಾಪುರ ಘಟಕದ ಅಧ್ಯಕ್ಷರಾದ ಜೇ ಎಫ್ ಎಂ ಚಂದನ್ ಗೌಡ , ಘಟಕದ ಕಾರ್ಯದರ್ಶಿ ಜೇಸಿ ಚೇತನ್ ದೇವಾಡಿಗ , ಜೊತೆ ಕಾರ್ಯದರ್ಶಿ ಜೇಸಿ ಪ್ರವೀಣ್ ಕುಮಾರ್ ಬಂಗೇರ, ಘಟಕದ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಜೇಸಿ ದೀಕ್ಷಿತಾ ಗೋಡೆ, ಮಹಿಳಾ ಜೆಸಿ ಸದಸ್ಯರಾದ ಜೇಸಿ ಜಯಲಕ್ಷ್ಮಿ ಗೋಡೆ, ಯುವ ಜೇಸಿ ಸದಸ್ಯರಾದ ದಿಶಾನ್ ಗೋಡೆ , ಜೇಸಿಲೇಟ್ ಲಿಖಿತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.