Home » ಜೆ ಸಿ ಐ ನಿಂದ ಸನ್ಮಾನ
 

ಜೆ ಸಿ ಐ ನಿಂದ ಸನ್ಮಾನ

by Kundapur Xpress
Spread the love

ಕುಂದಾಪುರ:  ಜೂನಿಯರ್ ಜೆಸಿ ಸಪ್ತಾಹದ ಅಂಗವಾಗಿ ಬೈಂದೂರು ಹಾಗೂ ಕುಂದಾಪುರ ಭಾಗಗಳಲ್ಲಿ ಶಿಕ್ಷಕಿಯಾಗಿ ಇತ್ತೀಚೆಗೆ ನಿವೃತ್ತಿಯಾದ ಶ್ರೀಮತಿ ಸುಮತಿ ಎಂ ಅವರನ್ನು ಅವರ ಮನೆಗೆ ತೆರಳಿ ಜೆಸಿ ಕುಟುಂಬದ ಸದಸ್ಯರು ಗೌರವಿಸಿ ಸನ್ಮಾನಿಸಿದರು. ಕುಂದಾಪುರ ಜೆಸಿಐ  ಅಧ್ಯಕ್ಷ ಸುಧಾಕರ್ ಕಾಂಚನ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಜೂನಿಯರ್ ಜೆ ಸಿ ಅಧ್ಯಕ್ಷ ಸತ್ಯನ್ ಎಸ್ ಕಾಂಚನ್ ಉಪಸ್ಥಿತರಿದ್ದು, ಪೂರ್ವ ಜೆಸಿಐ ವಲಯ ಅಧಿಕಾರಿ ರತ್ನಾಕರ ಕುಂದಾಪುರ ಮಾತನಾಡಿ ಶಿಕ್ಷಕರ ಪಾತ್ರ ಸಮಾಜದಲ್ಲಿ ಬಹಳ ಮುಖ್ಯವಾದದ್ದು, ಶಿಕ್ಷಕರು ಉತ್ತಮ ನಾಗರಿಕ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತಾರೆ. ಗುರು ಸ್ಥಾನದಲ್ಲಿರುವ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದಾಗಿದೆ, ಹಿಂದೆ ಗುರು ಮುಂದೆ ಗುರಿ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳನ್ನು ಭವ್ಯ ಭಾರತದ ಶ್ರೇಷ್ಠ ಪ್ರಜೆಗಳನ್ನಾಗಿ ಪರಿವರ್ತಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ, ಆ ನಿಟ್ಟಿನಲ್ಲಿ ಶ್ರೀಮತಿ ಸುಮತಿ ರವರು ಅಂಚೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾಗ ಅದಕ್ಕೆ ರಾಜೀನಾಮೆ ನೀಡಿ, ತಾವು ಕಲಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂಬ ಮಹದಾಸೆಯಿಂದ, ಶಿಕ್ಷಣ ಸೇವೆಯನ್ನು ನೀಡಿ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿದೆ , ಇಂತಹ ಉತ್ತಮ ಶಿಕ್ಷಕರನ್ನ ಜೆಸಿಐ ಸಂಸ್ಥೆ ಗೌರವಿಸುತ್ತಿರುವುದು ಎಲ್ಲರಿಗೂ ಮಾದರಿ, ಎಂದು ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಸುಮತಿ ಎಮ್ ಅವರು ಮಾತನಾಡಿ, ಜೆಸಿಐ ಸಂಸ್ಥೆಯವರು ನಮ್ಮ ಮನೆಗೆ ಬಂದು ನನ್ನನ್ನು ಗುರುತಿಸಿ ಗೌರವಿಸುವುದು, ಎಲ್ಲ ಸನ್ಮಾನಕ್ಕಿಂತ ತುಂಬಾ ಖುಷಿ ಕೊಟ್ಟಿದೆ, ಸಂಸ್ಥೆಯೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ಈ ಹಿಂದೆ ಭಾಗಿಯಾಗಿದ್ದೆ, ಇಂದು ಈ ಸಂಸ್ಥೆಯಿಂದ ಗೌರವಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಹಿಳಾಜೆಸಿಯ ಶ್ರೀಮತಿ ಪುಷ್ಪಲತಾ ರತ್ನಾಕರ್,ಜೆ ಸಿ ರವಿಚಂದ್ರ, ಜೆಸಿ ಉದಯ್ ಕುಮಾರ್, ಶ್ರೀಮತಿ ಮಂಜುಳಾ ರವಿಚಂದ್ರ ಮತ್ತು ಜೆಸಿಐ ಸದಸ್ಯರು ಉಪಸ್ಥಿತರಿದ್ದರು. ಜಿ ಆರ್ ಪ್ರಕಾಶ್ ಹಾಗೂ ಕುಟುಂಬದವರು ಸಹಕರಿಸಿದರು.ಜೆ ಸಿ ಐ ಕುಂದಾಪುರದ ಕಾರ್ಯದರ್ಶಿ ರಾಕೇಶ್ ಶೆಟ್ಟಿ ವಂದಿಸಿದರು

   

Related Articles

error: Content is protected !!