ಜನವರಿ 14- 15 ರಂದು ಕುಂದಾಪುರದಲ್ಲಿ
ಕುಂದಾಪುರ: ಉಡುಪಿ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕøತಿಕ ಕಲೆಗಳನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕಲಾಕ್ಷೇತ್ರ ಕುಂದಾಪುರ (ರಿ.) ಇದೇ ಜನವರಿ 14-15 ರಂದು ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಇನಿ-ದನಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಕುಂದಾಪುರ ಕಲಾಕ್ಷೇತ್ರದ ಅವಿನಾಶಿ ರಂಗಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಕಿಶೋರ್ ಕುಮಾರ್ ಕಳೆದ 2 ವರ್ಷಗಳಿಂದ ಕರೋನ ಕಾರಣದಿಂದ ಇನಿ-ದನಿ ಕಾರ್ಯಕ್ರಮವನ್ನು ಆಯೋಜಿಸಲಾಗಿಲ್ಲ. ಈ ಬಾರಿ ಕಾರ್ಯಕ್ರಮವನ್ನು ಪೂರ್ವ ಯೋಜನೆಯಂತೆ ಅಚ್ಚುಕಟ್ಟಾಗಿ, ಅದ್ಧೂರಿಯಾಗಿ ಸರಿಯಾದ ಸಮಯಕ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜನವರಿ 14 ರಂದು ಶನಿವಾರ ಪ್ರಕಾಶ್ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಸಂಸ್ಮರಣೆ ಕಾರ್ಯಕ್ರಮದ ನಿಮಿತ್ತ ಸಂಜೆ 6.00 ಕ್ಕೆ ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
ಜನವರಿ 15 ರಂದು ಆದಿತ್ಯವಾರ ಸಂಜೆ 6.00 ಕ್ಕೆ ಮಧುರ ಕನ್ನಡ ಚಿತ್ರಗೀತೆಗಳ ಸಂಗೀತ ಸಂಜೆ ಇನಿ-ದನಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮಧ್ಯಭಾಗದಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ.
ಇನಿ-ದನಿ ಕಾರ್ಯಕ್ರಮದಲ್ಲಿ 29 ಗಾಯನವನ್ನು ಹಾಡಲಾಗುತ್ತಿದ್ದು ಇದರಲ್ಲಿ 27 ಕಲಾವಿದರು ಭಾಗವಹಿಸುತ್ತಿದ್ದಾರೆ. ರಾಷ್ಟ್ರ ವಿಖ್ಯಾತ ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್ ರವರ ಜೊತೆಯಲ್ಲಿ ಕೆಲಸ ಮಾಡಿದ 5 ಕಲಾವಿದರು ವಯೋಲಿನ್ ವಿಭಾಗದಲ್ಲಿ ಭಾಗವಹಿಸುತ್ತಿರುವುದು ಈ ವರ್ಷದ ವಿಶೇಷ.
27 ಮಂದಿ ಕಲಾವಿದರಲ್ಲಿ 10 ಕಲಾವಿದರು ಗಾಯಕರಾಗಿದ್ದು, ಉಳಿದ 17 ಮಂದಿ ಕಲಾವಿದರು ಹಿನ್ನೆಲೆ ಗಾಯಕರಾಗಿದ್ದಾರೆ. ಕಲಾಕ್ಷೇತ್ರ ಕುಂದಾಪುರವು ಗಾಯಕರೊಂದಿಗೆ ಸಮಾನವಾಗಿ ಸಂಗೀತೋಪಕರಣ ನುಡಿಸುವ ಹಿನ್ನೆಲೆ ಗಾಯಕರಿಗೂ ಮಹತ್ವ ನೀಡಿದೆ
ಕಾರ್ಯಕ್ರಮದ ಮಧ್ಯಭಾಗದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹಾಬಲೇಶ್ವರ ಎಂ. ಎಸ್. ಹಾಗೂ ಮುಖ್ಯ ಆಕರ್ಷಣೆಯಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ರಮೇಶ್ ಭಟ್ ಭಾಗವಹಿಸಲಿದ್ದು, ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ನ್ಯಾಯವಾದಿ ಶ್ರೀಯುತ ಎ. ಎಸ್. ಎನ್. ಹೆಬ್ಬಾರ್ ಇವರನ್ನು ಬಸ್ರೂರು ಶ್ರೀ ಅಪ್ಪಣ್ಣ ಹೆಗ್ಡೆ ಸನ್ಮಾಲಿಸಲಿದ್ದಾರೆ. ಕಲಾಕ್ಷೇತ್ರ ಅವಿನಾಶಿ ರಂಗಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂಪರ್ ಗ್ರೇಡ್ ಇಲೆಕ್ಟ್ರೀಕಲ್ ಕಾಂಟ್ರಾಕ್ಟರ್ ಕೆ. ಆರ್. ನಾಯಕ್, ಪವಿತ್ರ ಡಿಜಿಟಲ್ ಸೈನ್‍ನ ದಾಮೋದರ ಪೈ ಮತ್ತು ಜೋಯ್ ಕರ್ವೇಲ್ಲೋ ಉಪಸ್ಥಿತರಿದ್ದು ರಾಜೇಶ ಕಾವೇರಿ ಸ್ವಾಗತಿಸಿ ಧನ್ಯವಾದವಿತ್ತರು.