Home ಇತರೆ20ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ಲೆಸೆಂಟ್

20ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ಲೆಸೆಂಟ್

ರಿಯಾಯಿತಿ ದರದಲ್ಲಿ ಮಾರಾಟ

by Kundapur Xpress

20ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ಲೆಸೆಂಟ್ ಕುಂದಾಪುರ

ರಿಯಾಯಿತಿ ದರದಲ್ಲಿ ಮಾರಾಟ

ತನ್ನ ಯಶಸ್ವಿ 19ನೇ ವರ್ಷವನ್ನು ಪೂರೈಸಿ 20ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಪ್ಲೆಸೆಂಟ್ ಕುಂದಾಪುರವು ಪಿಠೋಪಕರಣ ಹಾಗೂ ಗೃಹಪಯೋಗಿ ವಸ್ತುಗಳ ಬೃಹತ್ ಮಳಿಗೆಯನ್ನು ಹೊಂದಿದ್ದು, ತನ್ನ ಗ್ರಾಹಕರಿಗೆ ಜನವರಿ 11 ರಿಂದ 31ರ ತನಕ ವಿಶೇಷ ರಿಯಾಯತಿಯೊಂದಿಗೆ ಆಕರ್ಷಕ ಉಡುಗೊರೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪಾಲುದಾರರಾದ ಕೋಟ ಇಬ್ರಾಹಿಂ ಸಾಹೇಬ್, ಕೋಟ ಬಶೀರ್ ಸಾಹೇಬ, ಮಹಮ್ಮದ್ ಝಹ್ರಾನ್ ಅವರು ತಿಳಿಸಿದ್ದಾರೆ.

ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ಶೋರೂಮ್ ಹೊಂದಿರುವ ಸಂಸ್ಥೆ, ಬೆಡ್ ಸೆಂಟರ್ ಎಂಬ ಸಹ ಸಂಸ್ಥೆಯನ್ನು ಹೊಂದಿದೆ. ವೈವಿಧ್ಯಮಯ ಗೃಹೋಪಯೋಗಿ ವಸ್ತುಗಳ ಬೃಹತ್ ಭಂಡಾರಕ್ಕೆ ಖ್ಯಾತಿವೆತ್ತಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ್ಯಾಂಡ್‍ಗಳಾದ ಕುರ್ಲಾನ್, ಜುವಾರಿ, ಡ್ಯುರೋಪ್ಲೆಕ್ಸ್, ಗೋದ್ರೆಜ್, ನೀಲ್ ಕಮಲ್, ಸುಪ್ರೀಂ, ಶೀತಲ್ ಡ್ರೆಪ್, ಡಕ್ಕನ್, ಪ್ರೈಮಾ ಪ್ಲಾಸ್ಟಿಕ್ಸ್, ವೆಲ್‍ಹೋಮ್, ವೀವೇಸ್, ಬ್ಲೈಂಡ್ಸ್, ನಯಾಸ, ಬಾಥ್ಲಾ ಇನ್ನಿತರ ಬ್ರ್ಯಾಂಡ್‍ಗಳ ವಿಶೇಷ ಸಂಗ್ರಹವನ್ನು ಹೊಂದಿರುವ ಏಕೈಕ ಮಳಿಗೆಯಿದು. ಒಂದೇ ಸೂರಿನಡಿ ವೈವಿಧ್ಯಮಯ ಉತ್ತಮ ಶ್ರೇಣೀಯ ಬ್ರಾಂಡೆಡ್ ಪೀಠೋಪಕರಣಗಳೂ, ಪರದೆಗಳು, ಕಾರ್ಪೆಟ್ಗಳು, ಮ್ಯಾಟ್ಸ್, ಮ್ಯಾಟಿಂಗ್ಸ್, ಬೆಡ್ ಶೀಟ್ಸ್, ದಿವಾನ್ ಸೆಟ್ಸ್, ಬ್ಲಾಂಕೆಟ್ಸ್, ಸೋಫಾ ಸೆಟ್‍ಗಳು, ಕಾಟ್, ಡೈನಿಂಗ್ ಟೇಬಲ್, ಆಫೀಸ್-ಕಂಪ್ಯೂಟರ್ ಟೇಬಲ್ಸ್, ಟೀಪಾಯಿಗಳು, ಚಯರ್ಸ್, ಅಲ್ಮೇರಾ, ಕಾರ್ನರ್ ಸ್ಟ್ಯಾಂಡ್‍ಗಳು, ಇಸ್ತ್ರೀ ಸ್ಟ್ಯಾಂಡ್, ಕ್ಲಾತ್ ಸ್ಟ್ಯಾಂಡ್, ಡ್ರೈಯರ್ ಸ್ಟ್ಯಾಂಡ್, ಸ್ಲೀಪರ್ ಸೆಟ್ಸ್, ಪ್ರೊಟೆಕ್ಟರ್, ದಿವಾನ್ ಸೆಟ್ಸ್, ರಗ್ಸ್, ಸ್ಕೆಲ್ಲಪ್ಸ್, ಫಿಟಿಂಗ್ಸ್, ಬ್ಲೆಂಡ್ಸ್, ಪಿಲ್ಲೋಸ್, ಕುಶನ್, ಲ್ಯಾಡರ್, ಮ್ಯಾಟ್ರೆಸ್, ಡಿಕೊರೇಟಿವ್ ಪ್ಲವರ್ಸ್ ಫ್ಲ್ಯಾಂಟ್ಸ್, ಪಾಟ್ಸ್ ಮುಂತಾದ ಸಮಾಗ್ರಿ ಹೊಂದಿದೆ.

ರಿಯಾಯಿತಿ ಹಾಗೂ ವಿಶೇಷ ದರದಲ್ಲಿ ಮಾರಾಟ
ಸಂಸ್ಥೆಯ ಮೇಲಿನ ಅಭಿಮಾನದಿಂದ ಪ್ರೋತ್ಸಾಹಿಸುತ್ತಾ ಬಂದಿರುವ ಗ್ರಾಹಕರಿಗಾಗಿ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಜ. 11 ರಿಂದ 31 ರ ತನಕ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಹಮ್ಮಿಕೊಳ್ಳಲಾಗಿದ್ದು ಮುಂಗಡ ಬುಕ್ಕಿಂಗ್, ದರ ಕಡಿತ, ಉಚಿತ ಸಾಗಾಟ, ಆಕರ್ಷಕ ಉಡುಗೊರೆಯ ಅವಕಾಶ ಕಲ್ಪಿಸಲಾಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳ ಮೂಲಕವು ವ್ಯವಹಾರ ನಡೆಸಬಹುದು. ಗ್ರಾಹಕರು ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪಾಲುದಾರರಾದ ಇಬ್ರಾಹಿಂ ಸಾಹೇಬ್ ಕೋಟ, ಅಬ್ದುಲ್ ಬಶೀರ್ ಕೋಟ ಹಾಗೂ ಮಹಮ್ಮದ್ ಝಹ್ರಾನ್ ವಿನಂತಿಸಿದ್ದಾರೆ.

 

 

 

Related Articles

Leave a Comment

This site uses Akismet to reduce spam. Learn how your comment data is processed.