ವಾಣಿ ಜಯರಾಮ್‍ಗೆ ನುಡಿನಮನ
ಕುಂದಾಪುರ: ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ತಮಿಳು, ಕನ್ನಡ, ತೆಲುಗು, ತುಳು, ಹಿಂದಿ, ಮರಾಠಿ, ಮಲಯಾಳಂ, ಬಂಗಾಳಿ, ಓಡಿಯಾ ಸೇರಿದಂತೆ ಒಟ್ಟು 14 ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತವನ್ನು ಅಳವಡಿಸಿಕೊಂಡು ವಿಶಿಷ್ಟವಾಗಿ ಹಾಡುವ ಕಲೆಯನ್ನೂ ಅವರು ಸಿದ್ಧಿಸಿಕೊಂಡಿದ್ದರು ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಈ ಸಂದರ್ಭದಲ್ಲಿ ಕಲಾಕ್ಷೇತ್ರ ಟ್ರಸ್ಟಿನ ಗೀತಗಾಯನ ಕಾರ್ಯಕ್ರಮದ ಸದಸ್ಯರಾದ ಮೋಹನ ಸಾರಂಗ್, ಶ್ರೀಧರ್ ಸುವರ್ಣ, ದಾಮೋದರ ಪೈ, ಡಾ. ಹರಿಪ್ರಸಾದ್, ಶ್ರೀಪತಿ ಆಚಾರ್ಯ, ಗುರುಪ್ರಸಾದ್, ಕುಮಾರ್ ಕಾಂಚನ್, ಸ್ಮಿತಾ ಶೆಟ್ಟಿ, ವಂದನಾ ಕಾಂಚನ್, ಭವಾನಿ ಗಂಗಾಧರ್, ಪಾರ್ವತಿ ಕೊತ್ವಾಲ್, ಸಂಜೀವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು