ಓಂಕಾರ್ ಫ್ರೆಂಡ್ಸ್ ಬರೆಕಟ್ಟು
ಕುಂದಾಪುರ:ನಗರದ ಚರ್ಚ್ ರಸ್ತೆಯಲ್ಲಿರುವ ಶ್ರೀ ನಾಗ ಯಕ್ಷ ರಕ್ತೇಶ್ವರಿ ಪರಿವಾರ ದೇವಸ್ಥಾನ ಗೌರುಮನೆ ಬಂಕನ ಗದ್ದೆ ಇದರ 23ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಓಂಕಾರ್ ಫ್ರೆಂಡ್ಸ್ ಬರೆ ಕಟ್ಟು ರವರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿತು ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷರಾದ ರಾಜೇಶ್ ಕಾವೇರಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭಾ ಸದಸ್ಯರಾದ ಗಿರೀಶ್ ಜಿಕೆ ಹಾಗೂ ಪ್ರಭಾಕರ್ ಉಪಸ್ಥಿತರಿದ್ದರು ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ರಘುರಾಮ್ ಶೆಟ್ಟಿ ಹಾಗೂ ಶೀಲಾ ಶೆಟ್ಟಿ ಹಾಗೂ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಸತೀಶ್ ಬರೆಕಟ್ಟು ದೇವಸ್ಥಾನದ ಅಧ್ಯಕ್ಷರಾದ ಕೃಷ್ಣ ಪಂಡಿತ್ ಹಾಗೂ ಸ್ಥಳೀಯರಾದ ವಸಂತಿ ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ನಾಗೇಶ್ ಸಾಮಾಜಿಕ ಸೇವೆಯಲ್ಲಿ ವಾಸುದೇವ ಹಂದೇ ,ಕಾಶಿನಾಥ್ ಶೇಟ್, ಶ್ರೀಮತಿ ಸುಜಾತ ನಕಥಾಯ ಹಾಗೂ ಪುರಸಭೆಯ ವಿಶ್ವನಾಥ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು
ಹಾಗೂ ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು ಕುಂದಾಪುರ ಪುರಸಭಾ ಸದಸ್ಯರಾದ ರತ್ನಾಕರ್ ಕುಂದಾಪುರ ಪ್ರಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ತದನಂತರ ಕಲಾಸಂಗಮ ಕಲಾವಿದರಿಂದ ಶಿವದೂತ ಗುಳಿಗ ನಾಟಕ ಪ್ರದರ್ಶನಗೊಂಡಿತು ಸುಮಾರು 5,000ಕ್ಕೂ ಅಧಿಕ ಪ್ರೇಕ್ಷಕರು ನಾಟಕ ವೀಕ್ಷಿಸಿದರು

