ಕುಂದಾಪುರ : ಕುಂದಾಪುರ ನಗರದ ಚಿಕ್ಕಮ್ಮನ ಸಾಲು ರಸ್ತೆಯಲ್ಲಿರುವ ಶ್ರೀ ರಾಣುಮಕ್ಕಿ ನಾಗ ಬೊಬ್ಬರ್ಯ ಬನದ 2025 – 26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ ಆರ್ ಉಮೇಶ್ ರಾವ್ ಇವರು ಆಯ್ಕೆಯಾಗಿದ್ದಾರೆ ಕೆ.ಆರ್ ಉಮೇಶ್ ರಾವ್ ರವರು ಈ ಹಿಂದೆ ಕುಂದೇಶ್ವರ ದೇವಸ್ಥಾನದ ಮೊಕ್ತೇಸರರಾಗಿ ಹಾಗೂ ಕುಂದೇಶ್ವರ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಇದೀಗ ರಾಣಿಮಕ್ಕಿ ಶ್ರೀ ನಾಗಬೊಬ್ಬರ್ಯ ಬನದ ಸಮಿತಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ
ಗೌರವ ಅಧ್ಯಕ್ಷರಾಗಿ ಕೆ.ಆರ್ ಕಾಶೀನಾಥ್ ರವರು ಆಯ್ಕೆಯಾಗಿದ್ದು ಕಾರ್ಯದರ್ಶಿಗಳಾಗಿ ಕೆ.ಬಿ ವಿಷ್ಣು ನೇಮಕಗೊಂಡಿದ್ದಾರೆ ಖಜಾಂಚಿಯಾಗಿ ಕೆಪಿ ರವೀಂದ್ರ ಆಯ್ಕೆಯಾಗಿದ್ದಾರೆ. ಈ ಭಾರಿ ಶ್ರೀ ರಾಣುಮಕ್ಕಿ ನಾಗ ಬೊಬ್ಬರ್ಯ ಬನವು 26ನೇ ವರ್ಷದ ಪ್ರತಿಷ್ಠಾ ವರ್ಧಂತಿಯನ್ನು ಆಚರಿಸಿಕೊಳ್ಳುತ್ತಿದೆ