ಕೋಟ: ರೋಟರಿ ಕ್ಲಬ್ ಕೋಟ ಸಿಟಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಬ್ರಹ್ಮಾವರ ಸಿಟಿ ಸೆಂಟರ್ ಚಂದನಾ ಸಭಾಂಗಣದಲ್ಲಿ ಜರಗಿತು.
2026-27ನೇ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ. ಭಟ್ ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಸೇವೆಯಲ್ಲೂ ವಿಶ್ವದಾದ್ಯಾಂತ ಮನೆ ಮಾತಾಗಿದೆ. ಅದೇ ರೀತಿ ರೋಟರಿ ಕೋಟ ಸಿಟಿ ಕೂಡ ಗ್ರಾಮಾಂತರ ಭಾಗದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗುರುತಿಸಿಕೊಂಡಿದೆ ಎಂದರು. ಸಹಾಯಕ ಗವರ್ನರ್ ಮಮತಾ ಆರ್. ಶೆಟ್ಟಿ ಮಾತನಾಡಿ , ರೋಟರಿಯ ಮೂಲಕ ಸ್ನೇಹ, ಒಡನಾಟ ಹಾಗೂ ಸೇವೆಗೆ ಅವಕಾಶವಿದೆ. ಜಿಲ್ಲಾ ತಂಡದ ಯೋಜನೆಗಳಿಗೆ ಸಹಕಾರ ನೀಡುವಂತೆ ಕೇಳಿಕೊಂಡರು. ವಲಯ ಸೇನಾನಿ ನಿತ್ಯಾನಂದ ನಾೈರಿ ಶುಭಹಾರೈಸಿದರು.
2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನಿಲ್ ಸುವರ್ಣ, ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ ಅಧಿಕಾರ ಸ್ವೀಕರಿಸಿದರು. ಹಿಂದಿನ ಸಾಲಿನ ಅಧ್ಯಕ್ಷ ವೆಂಕಟೇಶ್ ಆಚಾರ್, ಕಾರ್ಯದರ್ಶಿ ನಿತ್ಯಾನಂದ ಆಚಾರ್ ಉಪಸ್ಥಿತರಿದ್ದರು. ಈ ಸಂದರ್ಭ ಸ್ಥಳೀಯ ಶಾಲಾ ಕಾಲೇಜಿನಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ನಿವೃತ್ತ ಸೇನಾನಿ ವಾಸುದೇವ ಅವರನ್ನು ಸಮ್ಮಾನಿಸಲಾಯಿತು. ನೂತನ ಸದಸ್ಯರಾಗಿ ಕೃಷ್ಣ ಪೂಜಾರಿ ಕ್ಲಬ್‍ಗೆ ಸೇರ್ಪಡೆಗೊಂಡರು. ರೋಟರಿ ಸದಸ್ಯ ಶಿವಾನಂದ ನಾೈರಿ ಸ್ವಾಗತಿಸಿ, ಹಿರಿಯ ಸದಸ್ಯ ಚಂದ್ರಶೇಖರ್ ಮೆಂಡನ್, ದಯಾನಂದ ಆಚಾರ್, ಸುರೇಶ್ ಆಚಾರ್, ವಿಷ್ಣುಮೂರ್ತಿ ಉರಾಳ, ಉದಯ ಹೆಗ್ಡೆ, ಸತೀಶ್ ಶೆಟ್ಟಿ, ಪ್ರಕಾಶ್ ಹಂದಟ್ಟು ಅತಿಥಿಗಳನ್ನು ಪರಿಚಯಿಸಿದರು. ಕ್ಲಬಿನ ಗೌರವ ಸದಸ್ಯ ಖ್ಯಾತ ಯಕ್ಷಗಾನ ಭಾಗವತರಾದ ಲಂಬೋದರ ಹೆಗ್ಡೆ ಮತ್ತು ತಂಡದವರಿಂದ ಸುಂದರ ಪ್ರಾರ್ಥನೆ ನೆರವೇರಿತು ಡಾ| ಗಣೇಶ್ ಯು ಕಾಂiÀರ್iಕ್ರಮ ನಿರೂಪಿಸಿದರು. ಈ ಸಂದರ್ಭ ಮಂದಿನ ಸಾಲಿಗೆ ರೋಟರಿ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಹಂದಟ್ಟು, ಆ್ಯನ್ಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ರೇವತಿ ಶ್ಯಾಮಸುಂದರ ನಾೈರಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಶಶಿಕಲಾ ಗಣೇಶ್ ಅವರನ್ನು ಗುರುತಿಸಲಾಯಿತು.