ಕೋಟ : ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇವರ ಸಾರಥ್ಯದಲ್ಲಿ ಮಹಿಳಾ ಮಂಡಲ ಸಾಸ್ತಾನ ಪಾಂಡೇಶ್ವರ ಮತ್ತು ಸ್ನೇಹ ಸಂಜೀವಿನಿ ಒಕ್ಕೂಟ ಇವರ ಸಹಯೋಗದೊಂದಿಗೆ ಕೌಶಲ್ಯ ತರಬೇತಿ ಹಳೆ ಸೀರೆಗಳಿಂದ ಮ್ಯಾಟ್ ತಯಾರಿಕೆ ತರಬೇತಿ ಕಾರ್ಯಗಾರ ಪಾಂಡೇಶ್ವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿಗೆ ನೆಡೆಯಿತು. ತರಬೇತುದಾರರಾಗಿ ಸಾಸ್ತಾನ ಮಹಿಳಾ ಮಂಡಲದ ಕಾರ್ಯದರ್ಶಿ ಜಾನೇಶ್ವರಿ ಉಡುಪ ಮಾತನಾಡಿ ಕರ ಕುಶಲತೆಯನ್ನು ಹವ್ಯಾಸ ಬೆಳೆಸಿಕೊಳ್ಳಿ ಮತ್ತು ಈ ಕೌಶಲ್ಯತೆ ಭಾರತದಲ್ಲಿ ನಮ್ಮ ಮಹಿಳೆಯರಿಗೆ ದೇವರು ನೀಡಿದ ವರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಅದರಂತೆ ತಮ್ಮ ಬಿಡುವಿನ ಸಮಯದಲ್ಲಿ ಹೌವ್ಯಾಸವಾಗಿ ಮೈಗೂಡಿಸಿಕೊಳ್ಳಿ ಎನ್ನುವ ಸಂದೇಶವನ್ನು ನೀಡಿದರು. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು. ಈ ವೇಳೆ ಜಾನೇಶ್ವರಿ ಉಡುಪರವರನ್ನು ಗೌರವಿಸಲಾಯಿತು. ರೋಟರಿ ಕಾರ್ಯದರ್ಶಿ ಸುಲತ.ಎಸ್ ಹೆಗ್ಡೆ ಮಾತನಾಡಿ ಇಂಥ ಮಹಿಳೆಯರು ನಮ್ಮ ಊರಿನ ಆಸ್ತಿ ಇಂಥ ಸೃಜನ ಶೀಲಾ ಮಹಿಳೆಯರನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಈ ಸಂಘಟನೆಗಳಿAದ ಆಗಬೇಕಾಗಿದೆ ಎನ್ನುವ ಮಾತನ್ನು ವ್ಯಕ್ತ ಪಡಿಸಿದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ, ರೋಟರಿ ಜೊತೆ ಕಾರ್ಯದರ್ಶಿ ಅಶೋಕ್ ಕುಮಾರ್ ,ರೋಟರಿ ಸಂಸ್ಥೆಯ ಹಿರಿಯ ಸದಸ್ಯೆ ರತ್ನ ಜೆ ರಾಜ್, ಸಂಜೀವಿನಿ ಒಕ್ಕೂಟದ ಸದಸ್ಯರು,ಮಹಿಳಾ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಮಂಡಲ ಸಾಸ್ತಾನ ಪಾಂಡೇಶ್ವರದ ಅಧ್ಯಕ್ಷೆ ಸುಮಿತ್ರಾ ಸುಧಾಕರ ಸ್ವಾಗತಿಸಿದರು. ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಉಷಾ ಕಾರ್ಯಕ್ರಮ ನಿರೂಪಿಸಿದರು.