Home » ಶ್ರೀ ಮೈಲಾರೇಶ್ವರ ಯುವಕ ಮಂಡಲ ಮಹಾಸಭೆ
 

ಶ್ರೀ ಮೈಲಾರೇಶ್ವರ ಯುವಕ ಮಂಡಲ ಮಹಾಸಭೆ

ನೂತನ ಅಧ್ಯಕ್ಷರ ಆಯ್ಕೆ

by Kundapur Xpress
Spread the love

 ಕುಂದಾಪುರ : ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಮೈಲಾರೇಶ್ವರ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಯುವಕ ಮಂಡಲದ ಸಭಾಂಗಣದಲ್ಲಿ ಜರುಗಿತು ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ರಾವ್ ರವರು ವಹಿಸಿದ್ದರು

2023 – 24ನೇ ಸಾಲಿನ ಜಿ ಆರ್ ಪ್ರಕಾಶ್ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದ ವರದಿಯನ್ನು ಓದಿ 2023-24 ನೇ ಸಾಲಿನ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು

ಇದೇ ಸಂದರ್ಭದಲ್ಲಿ 2024 – 25ರ ಸಾಲಿನ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಹಾಗೂ ಕಾರ್ಯದರ್ಶಿಗಳಾಗಿ ಶ್ರೀನಾಥ್ ಕೋಟೆಯವರನ್ನು  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ನಾಗರಾಜ್ ದಫೇದಾರ್ ಹಾಗೂ ಕ್ರೀಡಾ ಕಾರ್ಯದರ್ಶಿಗಳಾಗಿ ಅರುಣ್ ಬಾಣ ಆಯ್ಕೆಯಾದರು

ವೇದಿಕೆಯಲ್ಲಿ ಶ್ರೀ ಮೈಲಾರೇಶ್ವರ ಯುವಕ ಮಂಡಲದ ಅಧ್ಯಕ್ಷರಾದ ಜಿ ಆರ್ ಪ್ರಕಾಶ್ ರಾವ್ ಕಾರ್ಯದರ್ಶಿ ಮಧುಕರ್‌ ಕೆ ಸಚ್ಚಿದಾನಂದ ಕೆ ಜಿ ಶರತ್ ಕುಮಾರ್ ಲಕ್ಷ್ಮೀನಾರಾಯಣ ಗಾಣಿಗ ಮತ್ತು ಯುವಕ ಮಂಡಲದ ಹಿರಿಯ ಸದಸ್ಯರು ಉಪಸ್ಥಿತರಿದ್ದರು

ಡಿ ಸತೀಶ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ನೂತನ ಕಾರ್ಯದರ್ಶಿ ಶ್ರೀನಾಥ್‌ ಕೋಟೆ ಧನ್ಯವಾದವಿತ್ತರು

 

Related Articles

error: Content is protected !!