ರಾಷ್ಟ್ರಭಕ್ತಿಯ ಸ್ಪೂರ್ತಿಯ ಸೆಲೆಯೇ ಶಿವಾಜಿ
ಕುಂದಾಪುರ:ಇತಿಹಾಸ ಪ್ರಸಿಧ್ದ ಬಸ್ರೂರನ್ನು ದಚ್ಚರು ಹಾಗೂ ಪೋರ್ಚುಗೀಸರ ವಶದಿಂದ ಬಿಡುಗಡೆಗೊಳಿಸಿ ಅವರ ದಬ್ಬಾಳಿಕೆಯನ್ನು ಹಿಮ್ಮೆಟಿಸಿ ಪುನಃ ಕೆಳದಿ ಸಾಮ್ರಾಜ್ಯದ ಭಾಗವಾಗಿಸಿದ ದಿನವನ್ನು ಬಸ್ರೂರಿನ ಛತ್ರಪತಿ ಶಿವಾಜಿ ಬಳಗವು ಸಂಭ್ರಮ ಮತ್ತು ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು
ಗಂಗೊಳ್ಳಿಯ ಬಂದರಿನಿಂದ ಹಲವಾರು ದೋಣಿಗಳಲ್ಲಿ ಶಿವಾಜಿಯ ಪ್ರತಿಮೆಯೊಂದಿಗೆ ನೂರಾರು ಶಿವಾಜಿಯ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನದಿಯ ಮಾರ್ಗವಾಗಿ ಬಸ್ರೂರಿನ ಮಂಡಿಕೇರಿಗೆ ಬಂದು ಅಲ್ಲಿಂದ ಶೋಭಾಯಾತ್ರೆಯ ಮೂಲಕ ಶಿವಾಜಿ ಮೂರ್ತಿಯನ್ನು ಅಮ್ಮನವರ ಶ್ರೀ ದೇವಿ ದೇವಸ್ಥಾನದ ವಠಾರದವರೆಗೆ ಚಂಡೆ ವಾದನ, ಭಜನಾ ತಂಡಗಳು, ಕೀಲು ಕುದುರೆ, ಟ್ಯಾಬ್ಲೋ ಗಳೊಂದಿಗೆ ಸಾಗಿಬಂತು
ದೀಪ ಬೆಳಗುವ ಮುಖಾಂತರ ಶ್ರೀ ಶ್ರೀ ಶ್ರೀ ಸ್ವಾಮಿ ಶ್ರೀಪಾದ ಅವಧೂತ ಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಭಾರತೀಯ ಸಂತ ಸಭಾದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸಂದೀಪರಾಜ್ ಮಹಿಂದ್ ಪುಣೆ ಯವರು ಮಾತನಾಡಿ ಶಿವಾಜಿ ಬಸ್ರೂರಿಗೆ ಬಂದ ಇತಿಹಾಸವನ್ನು ತಿಳಿಸಿದರು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಸದಸ್ಯರು ಮತ್ತು ಪ್ರಾಧ್ಯಾಪಕರಾದ ಡಾ| ಎಮ್. ಕೊಟ್ರೇಶ್ ರವರು ತಮ್ಮ ಅದ್ಬುತ ವಾಘ್ಜರಿಯ ಮೂಲಕ ಸತ್ಯದ ಇತಿಹಾಸವನ್ನು ನೆನಪಿಸಿದರು ದಿಕ್ಷೂಚಿ ಭಾಷಣಕಾರರಾಗಿ ಆಗಮಿಸಿದ ಕಾರ್ಕಳದ ಲೇಖಕರು ಹಾಗೂ ಪತ್ರಕರ್ತರಾದ ಶ್ರೀಕಾಂತ್ ಶೆಟ್ಟಿಯವರು ತನ್ನ ಹರಿತದ ಮಾತಿನಿಂದ ನೆರೆದ ಜನಸ್ತೋಮವನ್ನು ಮಂತ್ರ ಮುಗ್ದರನ್ನಾಗಿಸಿದರು