ಕೋಟ : ಶ್ರೀ ದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ಇದರ ವಾರ್ಷಿಕ ಸಾಮಾನ್ಯ ಸಭೆ ಸಂಸ್ಥೆಯ ಅಧ್ಯಕ್ಷ ಕೃಷ್ಣ ಮಾಸ್ತರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.
ಸಂಘದ ಅಧ್ಯಕ್ಷ ಕೆ.ಕೃಷ್ಣ ಮಾಸ್ತರ್ ಎರಡು ವರ್ಷಗಳಲ್ಲಿ ಸಂಸ್ಥೆಯ ಪ್ರಗತಿಯನ್ನು ವಿವರಿಸಿದರಲ್ಲದೆ ಸಂಘದ ವಹಿವಾಟು 3,37,57,098/-, ನೀಡಿದ ಸಾಲ 5,76,00,000/-, ಹೊರಬಾಕಿ 3,12,05,450/- ಲಾಭಾಂಶ 4,03,774/- ಒಟ್ಟು ವ್ಯವಹಾರ 45 ಕೋಟಿ ವ್ಯವಹಾರಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸಹಕಾರಿ ಸಂಘಗಳ ರಾಜ್ಯಮಟ್ಟದ ನಿರ್ದೇಶಕರಾದ ಮಂಜುನಾಥ ಎಸ್.ಕೆ ಹಾಗೂ ಸಹಕಾರಿ ಸಂಘಗಳ ಅಭಿವೃದ್ದಿ ಅಧಿಕಾರಿ ವಿಜಯ ಬಿ.ಎಸ್ ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಸಲಹೆ ಸೂಚನೆ ನೀಡಿದರು.
ಸಂಘದ ಉಪಾಧ್ಯಕ್ಷರಾದ ಅರುಣ್.ಜಿ.ಕುಂದರ್, ನಿರ್ದೇಶಕರುಗಳಾದ ಕೃಷ್ಣಪ್ಪ ಬಂಗೇರ , ಪ್ರಭಾಕರ ಬಂಗೇರ, ವಿನೋದ್ ಕುಂದರ್ , ಹರ್ಷ ಕೆ ಬಿ, ಶುಭಕರ ಕುಂದರ್, ಕರುಣಾಕರ ಖಾರ್ವಿ, ಸುಧಾಕರ ಎಸ್ ಕಾಂಚನ್, ಗುಲಾಬಿ ,ಪುಷ್ಪಲತಾ ಎಸ್ ಸುವರ್ಣ, ಸುಜಾತ ಎಸ್ ರವರು ವೇದಿಕೆಯಲ್ಲಿ ಇದ್ದರು.
ಸಂಘ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪವನ್ 2023-2024 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು , ಕುಮಾರಿ ಸ್ವಾತಿ ಅವರು ನಿರೂಪಣೆ ಗೈದರು , ಸಿಬ್ಬಂದಿಯಾದ ನಿತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.