ಕೋಟ: ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ ಬ್ರಹ್ಮಾವರ ಇದರ 44 ನೇ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ನಾಯರಿ ಸಮುದಾಯ ಭವನ ಕಾರ್ಕಡ ಸಾಲಿಗ್ರಾಮದಲ್ಲಿ ಅಧ್ಯಕ್ಷ ಎಂ.ಚAದ್ರಶೇಖರ್ ನಾಯರಿ ಮಟಪಾಡಿ. ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಭೆಯಲ್ಲಿ ಸಮಾಜದ ಏಳು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ,ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಅನೇಕ ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಇದೇ ವೇಳೆ 2024-2026 ನೇ ಸಾಲಿನ ಹೊಸ ಆಡಳಿತ ಮಂಡಳಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಪ್ರಭಾಕರ್ ನಾಯರಿ ಕಿರಿಮಂಜೇಶ್ವರ. ಗೌರವಾಧ್ಯಕ್ಷರಾಗಿ ಮಂಜುನಾಥ ನಾಯರಿ ಕಾರ್ತಟ್ಟು. ಶಿವಕುಮಾರ್ ಕಾರ್ಕಡ. ಲಿಂಗಯ್ಯ ನಾಯರಿ ಮಟಪಾಡಿ. ಉಪಾಧ್ಯಕ್ಷರಾಗಿ ದಿನೇಶ್ ನಾಯರಿ ಬ್ರಹ್ಮಾವರ. ಶ್ಯಾಮ ಸುಂದರ್ ನಾಯರಿ ಕಾರ್ತಟ್ಟು. ಕಾರ್ಯದರ್ಶಿಯಾಗಿ ಕೆ,ವಿಜಯ ಕಾರ್ಕಡ. ಕೋಶಾಧಿಕಾರಿಯಾಗಿ ಜಯರಾಮ್ ನಾಯರಿ ಮಟಪಾಡಿ. ಜೊತೆ ಕಾರ್ಯದರ್ಶಿಯಾಗಿ ಎಂ ಮಂಜುನಾಥ ನಾಯರಿ ಬ್ರಹ್ಮಾವರ. ಸರಸ್ವತಿ ನಾಯರಿ ಕಿರಿಮಂಜೇಶ್ವರ . ಸಂಘಟನಾ ಕಾರ್ಯದರ್ಶಿಯಾಗಿ. ಉಮೇಶ್ ನಾಯರಿ ಕಾರ್ತಟ್ಟು. ಅಶೋಕ್ ನಾಯರಿ ಕಿರಿಮಂಜೇಶ್ವರ. ಪವನ್ ಕುಮಾರ್ ಮಟಪಾಡಿ. ಇವರುಗಳು ಪದಾಧಿಕಾರಿಗಳಾಗಿ ಆಯ್ಕೆಯಾದರು. ಲೆಕ್ಕಪರಿಶೋಧಕರಾಗಿ ಮುರುಳಿಧರ್ ನಾಯರಿ ಕಾರ್ಕಡ ಇವರನ್ನು ಆಯ್ಕೆ ಮಾಡಲಾಯಿತು.