ಕುಂದಾಪುರ : ನಗರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ರಾಮಕ್ಷತ್ರಿಯ ಯುವಕ ಮಂಡಳಿಯ ನೇತ್ರತ್ವದಲ್ಲಿ ಸಾಮೂಹಿಕ ಬ್ರಹ್ಮೋಪದೇಶವು ಸಂಪನ್ನಗೊಂಡಿತು ಅರ್ಚಕ ನಾರಾಯಣ ಹೊಳ್ಳ ರವರ ನೇತೃತ್ವದಲ್ಲಿ ನಡೆದ ಉಪನಯನ ಕಾರ್ಯಕ್ರಮದಲ್ಲಿ 21 ವಟುಗಳು ಧೀಕ್ಷೆಯನ್ನು ಸ್ವೀಕರಿಸಿದರು
ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ಯಮಿಗಳಾದ ದತ್ತಾನಂದ ಗಂಗೊಳ್ಳಿಯವರು ಉದ್ಘಾಟಿಸಿದರು ಕುಂದಾಪುರ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಡಿ ಕೆ ಪ್ರಭಾಕರ್ ರವರು ಅಧ್ಯಕ್ಷತೆ ವಹಿಸಿದ್ದು ಡಾ.ವಿಜಯ ಮಂಜರವರು ಧಾರ್ಮಿಕ ಪ್ರವಚನ ನೀಡಿದರು
ಮುಖ್ಯಅತಿಥಿಗಳಾಗಿ ರಕ್ಷಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸುರೇಶ್ ಬೆಟ್ಟಿನ್ ಶ್ರೀರಾಮ ಕ್ರೆಡಿಟ್ ಕೋಅಪರೇಟಿವ್ ಸೊಸ್ಯಟಿಯ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಹಾಗೂ ಉದ್ಯಮಿ ಅಜಯ್ ಹವಲ್ದಾರ್ ಆಗಮಿಸಿದ್ದರು ರತ್ನಾಕರ್ ಮಕ್ಕಿಮನೆ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ಸ್ವಾಗತಿಸಿ ಕಾರ್ಯದರ್ಶಿ ಕೆ.ಬಿ.ವಿಷ್ಣು ವಂದಿಸಿದರು ಪೂರ್ಣೇಶ್ ಪ್ರಾರ್ಥಿಸಿದರು
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶ್ರಿನಿವಾಸ್ ಪಡುಕೇರಿ ಖಜಾಂಚಿ ನಾಗರಾಜ್ ದಫೇದಾರ್ ಶ್ರೀಧರ್ ಪಿ ಎಸ್ ಅನುಪಮ್ ನಾಗರಾಜ್ ಹಾಗೂ ಪ್ರಭಾಕರ್ ಮತ್ತು ಶಾಲಿನಿ ವೆಂಕಟೇಶ್ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಕುಂದಾಪುರ ರಾಮಕ್ಷತ್ರಿಯರ ಸಂಘದ ಸದಸ್ಯರು ರಾಮಕ್ಷತ್ರಿಯ ಮಹಿಳಾ ಮಂಡಳಿಯ ಸದಸ್ಯರು ಹಾಗೂ ರಾಮಕ್ಷತ್ರಿಯ ಯುವಕ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಸಾಸ್ತಾನದ ಡಾ. ವಿಜಯ್ ಮಂಜರನ್ನು ಸನ್ಮಾನಿಸಲಾಯಿತು