ಕಾರ್ಕಳ: ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುದೆಲ್ಕಡಿ ಸಮೀಪದ ಉಬೈಲು ಗುಂಡಿ ಕೆರೆಯಲ್ಲಿ ಭಾನುವಾರ ನಡೆದಿದೆ. ಹರೀಶ್ ಪೂಜಾರಿ (48,) ರಿತೇಶ್ (18) ಮೃತಪಟ್ಟವರು. ಶಿರ್ಲಾಲು ಗ್ರಾಮದ ಹರೀಶ್ ಪೂಜಾರಿ ಜೊತೆ ಅವರ ಸಹೋದರಿ ಪುತ್ರ ಕೆರುವಾಶೆ ಗ್ರಾಮದ ರಿತೇಶ್ ಭಾನುವಾರ ಮೀನು ಹಿಡಿಯಲು ಹೋಗಿದ್ದು, ಆ ವೇಳೆ ಈ ದುರ್ಘಟನೆ ನಡೆದಿದೆ. ಮೀನು ಹಿಡಿಯುತ್ತಿದ್ದ ವೇಳೆ ಕೆಸರಲ್ಲಿ ಹೂತು ಹೋದ ರಿತೇಶ್ ಮುಳುಗುವುದು ಕಂಡು ಆತನನ್ನು ರಕ್ಷಿಸಲು ಹೋದ ಹರೀಶ್ ಪೂಜಾರಿ ಕೂಡ ನೀರಿನಲ್ಲಿ ಮುಳುಗಿ ದುರ್ಘಟನೆ ಸಂಭವಿಸಿತು. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ