Home » ಉಡುಪಿಯಲ್ಲಿ 35 ಮಂದಿ ಅಭ್ಯರ್ಥಿಗಳು
 

ಉಡುಪಿಯಲ್ಲಿ 35 ಮಂದಿ ಅಭ್ಯರ್ಥಿಗಳು

by Kundapur Xpress
Spread the love

ಉಡುಪಿಯಲ್ಲಿ 35 ಮಂದಿ ಅಭ್ಯರ್ಥಿಗಳು
ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಇಬ್ಬರು ಮಹಿಳಾ ಸ್ಪರ್ಧಿಗಳು. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 9, ಕುಂದಾಪುರದಲ್ಲಿ 5, ಉಡುಪಿಯಲ್ಲಿ 7, ಕಾಪುವಿನಲ್ಲಿ 5 ಹಾಗೂ ಕಾರ್ಕಳದಲ್ಲಿ 9 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿಲ್ಲ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಜಯರಾಜ್, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ದೀನ ಪ್ರಭಾಕರ ಸಾಲ್ಯಾನ್, ಕೆ. ಕೃಷ್ಣಮೂರ್ತಿ ಆಚಾರ್ಯ, ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ರಝಾಕ್ ಶಾಬನ್ ಅಹ್ಮದ್ ಮತ್ತು ಅಬ್ದುಲ್ ರಹಿಮಾನ್, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣ ಶೆಟ್ಟಿ ಮತ್ತು ಕೆ.ಹರೀಶ್ ಪೂಜಾರಿ ನಾಮಪತ್ರಗಳನ್ನು ಹಿಂಪಡೆದಿರುತ್ತಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುರುರಾಜ ಶೆಟ್ಟಿ ಗಂಟಿಹೊಳೆ, ಕಾಂಗ್ರೆಸ್‍ನಿಂದ ಕೆ.ಗೋಪಾಲ ಪೂಜಾರಿ, ಜೆಡಿಎಸ್‍ನಿಂದ ಮನ್ಸೂರ್ ಇಬ್ರಾಹಿಂ, ಆಮ್ ಆದ್ಮಿ ಪಾರ್ಟಿಯ ಸಿ.ಎ. ರಮಾನಂದ ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್, ರಾಷ್ಟ್ರೀಯ ಸಮಾಜದಳ (ಆರ್)ನ ಕೊಲ್ಲೂರು ಮಂಜುನಾಥ ನಾಯ್ಕ, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ಜಿ., ಶ್ಯಾಮ ಬಿ, ಎಚ್. ಸುರೇಶ್ ಪೂಜಾರಿ ಚುನಾವಣಾ ಕಣದಲ್ಲಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಎ.ಕಿರಣ್ ಕುಮಾರ್ ಕೊಡ್ಗಿ, ಕಾಂಗ್ರೆಸ್ ಪಕ್ಷದ ದಿನೇಶ್ ಹೆಗ್ಡೆ ಮೊಳಹಳ್ಳಿ, ಜನತಾದಳ (ಜಾತ್ಯಾತೀತ) ದ ರಮೇಶ, ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ ಮತ್ತು ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ್ ಜಿ. ಚುನಾವಣಾ ಕಣದಲ್ಲಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಶ್‍ಪಾಲ್ ಸುವರ್ಣ, ಜನತಾದಳ (ಜಾತ್ಯಾತೀತ) ದ ದಕ್ಷತ್ ಆರ್. ಶೆಟ್ಟಿ, ಆಮ್ ಆದ್ಮಿ ಪಾರ್ಟಿಯ ಪ್ರಭಾಕರ ಪೂಜಾರಿ, ಕಾಂಗ್ರೆಸ್ ಪಕ್ಷದ ಪ್ರಸಾದ್ ರಾಜ್ ಕಾಂಚನ್, ಉತ್ತಮ ಪ್ರಜಾಕೀಯ ಪಕ್ಷದ ನಿತಿನ್ ವಿ ಪೂಜಾರಿ, ಕರ್ನಾಟಕ ರಾಷ್ಟ್ರ ಸಮತಿ ಪಕ್ಷದ ರಾಮದಾಸ ಭಟ್, ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ (ಕರ್ನಾಟಕ) ದ ಶೇಖರ್ ಹಾವಂಜೆ ಚುನಾವಣಾ ಕಣದಲ್ಲಿದ್ದಾರೆ

   

Related Articles

error: Content is protected !!