Home »  ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮಹಿಳೆಯರ ರಕ್ಷಣೆ
 

 ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮಹಿಳೆಯರ ರಕ್ಷಣೆ

by Kundapur Xpress
Spread the love

ಉಳ್ಳಾಲ : ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಟ್ಟು ಉಳ್ಳಾಲದ ಸಮುದ್ರ ತೀರ ವಿಹಾರಕ್ಕೆ ತೆರಳಿದ್ದ ಐವರು ಮಹಿಳೆಯರಲ್ಲಿ ನಾಲ್ವರು ಸಮುದ್ರಪಾಲಾಗುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಮೊಗವೀರ ಸಮುದಾಯದ ಈಜುಗಾರರು ಅವರನ್ನು ರಕ್ಷಿಸಿದ ಘಟನೆ ನಡೆದಿದೆ.

ಗಂಭೀರಗೊಂಡ ಓರ್ವ ಮಹಿಳೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಾಯಂಡನ ಹಳ್ಳಿಯ ಸವಿತಾ (38), ಸೌಮ್ಯ (39), ಬಿಂದು (20), ಪದ್ಮಿನಿ (38) ಮತ್ತು ಮಂಜುಳ (35) ಎಂಬ ಐವರು ಮಹಿಳೆಯರು ಭಾನುವಾರ ಬೆಳಿಗ್ಗೆ ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ಮಧ್ಯಾಹ್ನ ವೇಳೆ ಉಳ್ಳಾಲ ಬೀಚ್‌ ಗೆ ತೆರಳಿದ್ದರು. ಐವರು ಯುವತಿಯರು ಸಮುದ್ರ ತೀರದಲ್ಲಿ ಕುಳಿತ್ತಿದ್ದ ವೇಳೆ ಬೃಹತ್ ಗಾತ್ರದ ಅಲೆಯೊಂದು ತೀರಕ್ಕೆ ಅಪ್ಪಳಿಸಿದ್ದು ಸವಿತಾ, ಸೌಮ್ಯ, ಬಿಂದು, ಪದ್ದಿನಿ ನೀರುಪಾಲಾಗಿದ್ದಾರೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಸ್ಥಳೀಯ ಈಜುಗಾರರು ನಾಲ್ವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪದ್ದಿನಿ ಸ್ಥಿತಿ ಸ್ವಲ್ಪ ಗಂಭೀರಗೊಂಡಿದ್ದು ಉಳಿದವರು ಚೇತರಿಸಿದ್ದಾರೆ.

 

Related Articles

error: Content is protected !!