Home » ರೇಪ್‌ & ಮರ್ಡರ್‌ : ಅರೋಪಿ ಎನಕೌಂಟರ್
 

ರೇಪ್‌ & ಮರ್ಡರ್‌ : ಅರೋಪಿ ಎನಕೌಂಟರ್

ಮಹಿಳಾ ಪಿ ಎಸ್‌ ಐ ಅನ್ನಪೂರ್ಣ

by Kundapur Xpress
Spread the love

ಹುಬ್ಬಳ್ಳಿ : ಅಂಗಳದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿ, ಅಮಾನುಷವಾಗಿ ಹತ್ಯೆಗೈದ ಬಿಹಾರ ಮೂಲದ ಆರೋಪಿ ಹುಬ್ಬಳ್ಳಿಯ ಮಹಿಳಾ ಪಿಎಸ್‌ಐ ನಡೆಸಿದ ಎನಕೌಂಟರ್ ಗೆ ಬಲಿಯಾದ ಘಟನೆ ಘಟನೆ  ನಡೆದಿದೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಶರಣಪ್ಪ -ಲತಾಕುರಿ ದಂಪತಿಯ ಪುತ್ರಿ ಆಧ್ಯಾಸಾಯಿ (5ವರ್ಷ) ಮೃತ ಬಾಲಕಿ. ಬಿಹಾರ ಮೂಲದ ಗಾರೆ ಕೆಲಸಗಾರ ರಕ್ಷಿತ್ ಕುಮಾರ ಕ್ರಾಂತಿ (35ವರ್ಷ), ಪೊಲೀಸ್ ಎನ್‌ಕೌಂಟರ್ ನಲ್ಲಿ ಬಲಿಯಾದ ಆರೋಪಿ. ಘಟನೆ ನಡೆದ ಬರೀ ಏಳೆಂಟು ಗಂಟೆಯಲ್ಲೇ ಆರೋಪಿಯನ್ನು ಎನ್ ಕೌಂಟರ್‌ ಮಾಡಿರುವ ಮಹಿಳಾ ಪಿ ಎಸ್‌ ಐ  ಅನ್ನಪೂರ್ಣಾ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 

ಬಾಲಕಿ ಅಪಹರಿಸಿ, ನೀಚ ಕೃತ್ಯವೆಸಗಿದ ಪಾಪಿ :

ಶರಣಪ್ಪ-ಲತಾಕುರಿ ದಂಪತಿ ಕಳೆದ ಹಲವು ವರ್ ಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಶರಣಪ್ಪ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ಲತಾ ಮನೆಗೆಲಸ ಮಾಡುತ್ತಿದ್ದರು. ಎಂದಿನಂತೆ ಲತಾ ಭಾನುವಾರ ಬೆಳಗ್ಗೆ ವಿಜಯನಗರ ಬಡಾವಣೆಯಲ್ಲಿರುವ ಮನೆಯೊಂದಕ್ಕೆ ಕೆಲಸಕ್ಕೆ ಹೋದ ವೇಳೆ ಮಗಳನ್ನೂ ಕರೆದುಕೊಂಡು ಹೋಗಿದ್ದರು. ತಾಯಿ ಮನೆಯ ಒಳಗಡೆ ಕೆಲಸ ಮಾಡುತ್ತಿದ್ದಾಗ ಮಗಳು ಆಧ್ಯಾಸಾಯಿ ಮನೆ ಮುಂದಿನ ಆವರಣದಲ್ಲಿ ಆಟವಾಡಿಕೊಂಡಿದ್ದಳು

ಈ ವೇಳೆ ಮಗುವಿನ ಚಲನವಲನ ಗಮನಿಸಿದ ರಕ್ಷಿತ್ ಕುಮಾರ ಎಂಬಾತ, ಬಾಲಕಿಗೆ ಚಾಕೋಲೆಟ್ ಕೊಡಿಸುವುದಾಗಿ ಹೇಳಿ ಆಮಿಷ ತೋರಿಸಿ ಅಪಹರಿಸಿ, ಸಮೀಪದಲ್ಲೇ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಶೌಚಾಲಯಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಬಾಲಕಿ ಕಿರುಚಾಡಿದಾಗ ಕತ್ತು ಹಿಸುಕಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ,

ಬಳಿಕ ಮನೆ ಕೆಲಸ ಮುಗಿಸಿಕೊಂಡು ಬಂದ ತಾಯಿಗೆ ಮಗಳು ಕಾಣಿಸದೇ ಇದ್ದಾಗ ಗಾಬರಿಯಿಂದ ಹುಡುಕಾಟ ನಡೆಸಿದಳು. ಆಗ ಶೌಚಾಲಯದಲ್ಲಿ ಮಗು ಶವವಾಗಿ ಬಿದ್ದಿರುವುದು ಕಂಡಿತು. ತಾಯಿಯ ರೋದನ ಕೇಳಿ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು

ಭುಗಿಲೆದ್ದ ಆಕ್ರೋಶ :

ಮಗುವಿನ ಹತ್ಯೆಯ ಸುದ್ದಿ ನಗರದಲ್ಲಿ ಕಾಡಿಚ್ಚಿನಂತೆ ಹಬ್ಬಿ ಸ್ಥಳೀಯರು ಅಶೋಕನಗರ ಠಾಣೆಯ ಎದುರು ಜಮಾವಣೆಗೊಂಡು ಪ್ರತಿಭಟನೆ ಶುರು ಮಾಡಿದರು. ಆರೋಪಿಯನ್ನು ಬಂಧಿಸಿ ಎನ್ ಕೌಂಟ‌ರ್ ಮಾಡಬೇಕು, ಇಲ್ಲವೇ ಆರೋಪಿಯನ್ನು ನಮಗೆ ನೀಡಿ, ನಾವೇ ಶಿಕ್ಷೆ ಕೊಡುತ್ತೇವೆ ಎಂದು ಆಗ್ರಹಿಸಿ 5 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಠಾಣೆಗೆ ಪೊಲೀಸ್ ಕಮಿಷನರ್‌ ಎನ್ ಶಶಿಕುಮಾರ ಹಾಗೂ ಹಿರಿಯ ಅಧಿಕಾರಿಗಳು ಆಗಮಿಸಿ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಧ್ಯಾಹ್ನದ ಬಳಿಕ ಮಹಿಳಾ ಸಂಘಟನೆಗಳು, ವಿವಿಧ ಜನಪರ ಸಂಘಟನೆಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದವು. ಈ ವೇಳೆ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು, ನೂಕುನುಗ್ಗಲು ಏರ್ಪಟ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜೊತೆಗೆ, ನಗರದ ಇತರೆಡೆಯೂ ಪ್ರತಿಭಟನೆಗಳು ನಡೆದವು. ಕೆಎಂಸಿ ಶವಾಗಾರದ ಎದುರಿಗೆ ಟೈರ್‌ಗೆ ಬೆಂಕಿ ಹಚ್ಚಲಾಯಿತು. ಪ್ರತಿಭಟನೆಯಿಂದಾಗಿ ನಗರದ ಕೆಲವೆಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು

 

Related Articles

error: Content is protected !!