Home » 5 ಲಕ್ಷ ರೂ.ಬಹುಮಾನ :
 

5 ಲಕ್ಷ ರೂ.ಬಹುಮಾನ :

by Kundapur Xpress
Spread the love

5 ಲಕ್ಷ ರೂ.ಬಹುಮಾನ :
ಕುಂದಾಪುರ: ಆರು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ
ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿಯ ಯುವ ಕಾರ್ಯಕರ್ತ
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ
ಇಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ 5ಲಕ್ಷ ಬಹುಮಾನ ನೀಡುವುದಾಗಿ
ರಾಷ್ಟ್ರೀಯ ತನಿಖಾ ಸಂಸ್ಧೆ (ಎನ್‌ಐಎ) ಘೋಷಿಸಿದೆ.
2022ರ ಜೂ.26ರಂದು ರಾತ್ರಿ 8.30ಗಂಟೆಯ ಸುಮಾರಿಗೆ
ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳ ತಂಡ ಹತ್ಯೆಗೈದಿತ್ತು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪಿ ಎಫ್‌ ಐ ಸಂಘಟನೆಯ ಬಂಟ್ವಾಳ
ತಾಲೋಕಿನ ಮೊಹಮ್ಮದ್‌ ಷರೀಫ್ ಹಾಗೊ ನೆಕ್ಕಿಲಾಡಿಯ ಮಸೂದ್‌ ಸದ್ಯ ತಲೆಮರೆಸಿಕೊಂಡಿದ್ದು
ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 5ಲಕ್ಷ ಬಹುಮಾನ
ನೀಡುವುದಾಗಿ ಎನ್‌ ಐ ಎ ಪ್ರಕಟಣೆ ನೀಡಿದೆ

   

Related Articles

error: Content is protected !!