ಉಡುಪಿ : ಮಂಗಳೂರು ನಗರದಲ್ಲಿ ಸಿ ಸಿ ಬಿ ಯಲ್ಲಿ ಡಿ ವೈ ಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಮೇಶ್ವರ್ ಹೆಗಡೆಯವರಿಗೆ ಕರ್ನಾಟಕ ಸರಕಾರವು ಮುಂಬಡ್ತಿ ನೀಡಿ ಉಡುಪಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ
ಪರಮೇಶ್ವರ್ ಅನಂತ ಹೆಗಡೆಯವರು ಈ ಹಿಂದೆ ಮೂಲ್ಕಿ ವೃತ್ತ ನಿರೀಕ್ಷಕರಾಗಿ ಬಂಟ್ವಾಳದಲ್ಲಿ ಉಪ ನಿರೀಕ್ಷಕರಾಗಿ ಮಂಗಳೂರು ನಗರದ ಅಪರಾದ ವಿಭಾಗದ (ಸಿಸಿಬಿ) ಡಿವೈಎಸ್ಪಿಯಾಗಿಕರ್ತವ್ಯ ನಿರ್ವಹಿಸಿದ್ದು ಅಪಹರಣ ಮತ್ತು ಕೊಲೆ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಅವರಿಗೆ ಜ್ಯೇಷ್ಠತಾ ಪ್ರಶಸ್ತಿ ಕೂಡ ಲಭಿಸಿದೆ