ಕೋಟ: ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಇವರ ವತಿಯಿಂದ ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ಮುಂಗಾರು ಹಂಗಾಮಿನ ಭತ್ತದ ಗದ್ದೆಗಳಲ್ಲಿ ವೌಚೇರಿಯಾ (ಹಳದಿ ಹಸಿರು ಪಾಚಿ) ಚೌತಿಯ ಕಳೆ ಹಾಗೂ ಇತರೆ ಕಳೆ ಜಾತಿಗಳ ನಿರ್ವಹಣೆ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಇತ್ತೀಚಿಗೆ ಮಣೂರು ಪಡುಕೆರೆ ಗ್ರಾಮದ ಪ್ರಗತಿಪರ ಕೃಷಿಕರಾದ ಜಯರಾಮ ಶೆಟ್ಟಿ ಇವರ ಮನೆಯ ವಠಾರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪ್ರಗತಿ ಪರ ಕೃಷಿಕರಾದ ಕೃಷಯ್ಯ ಶೆಟ್ಟಿ ಉದ್ಘಾಟಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಭಾಸ್ಕರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜ್ಞಾನಿಗಳು, ರೈತರು, ರೈತಮಹಿಳೆಯರಿಗೆ ಸ್ವಾಗತವನ್ನು ಕೋರಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ, ಬ್ರಹ್ಮಾವರದ ಕೆ.ವಿ.ಕೆ. ವಿಜ್ಞಾನಿ ಡಾ. ಎನ್.ನವೀನ (ಬೇಸಾಯಶಾಸ್ತ್ರ) ಇವರು ಭತ್ತದ ಗದ್ದೆಗಳಲ್ಲಿ ಬರುವ ವಿವಿಧ ಜಾತಿಯ ಕಳೆಗಳ ನಿರ್ವಹಣೆ ಬಗ್ಗೆ ನೆರೆದಿದ್ದ ರೈತರಿಗೆ ಮಾಹಿತಿಯನ್ನು ನೀಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ ಇಂತ ವಿಷೇಶವಾದ ಕಾರ್ಯಕ್ರವನ್ನು ಆಯೋಜನೆ ಮಾಡಿದ್ದಕ್ಕಾಗಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಧನ್ಯವಾದವನ್ನು ತಿಳಿಸಿದರು.