Home » ಇಂದು ‘ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ’
 

ಇಂದು ‘ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ’

ಬಸ್ರೂರು ಶಾರದ ಕಾಲೇಜು

by Kundapur Xpress
Spread the love

ಬಸ್ರೂರು : ಧಾರ್ಮಿಕ ಮುಂದಾಳು, ಮಾಜಿ ಶಾಸಕ ಬಿ. ಅಪೂಣ್ಯ ಹೆಗ್ಡೆ ಅವರ 90 ನೇ ವರ್ಷಾಚರಣೆ ಡಿ.24ಕ್ಕೆ ಸಾರ್ವಜನಿಕರ ಭಾಗೀದಾರಿಕೆಯೊಂದಿಗೆ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ನ.30ರ ಸಂಜೆ 6 ಗಂಟೆಯಿಂದ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಆವರಣದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ

ಆಳ್ವಾಸ್‌ನ 400 ಜನ ವಿದ್ಯಾರ್ಥಿಗಳು ವಿಶಾಲ ರಂಗದ ಮೇಲೆ ದೇಶ-ವಿದೇಶದ ಅಪರೂಪದ ಸಾಂಸ್ಕೃತಿಕ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಲಿದ್ದಾರೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅವುಣ್ಣ ಹೆಗ್ಡೆಯವರಿಗೆ ಕಲಾ ಗೌರವವನ್ನು ಈ ಮೂಲಕ ಸಮರ್ಪಿಸಲಿದ್ದಾರೆ.

ಶಾಸ್ತ್ರೀಯ ನೃತ್ಯ – ಭೋ ಶಂಭೋ ಗುಜರಾತಿನ ಗಾರ್ಭ ಮತ್ತು ದಾಂಡಿಯ, ಸೃಜನಾತ್ಮಕ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಣಿಪುರಿಯ ಸ್ಟಿಕ್ ಡ್ಯಾನ್ಸ್ ಬಡಗುತಿಟ್ಟಿನ – ಶ್ರೀ ರಾಮ ಪಟ್ಟಾಭಿಷೇಕ, ಕಥಕ್ ನೃತ್ಯ- ವರ್ಷಧಾರೆ, ಪಶ್ಚಿಮ ಬಂಗಾಳದ ಪುರುಲಿಯಾ ನೃತ್ಯ, ಡೊಳ್ಳು ಕುಣಿತ, ಮಲ್ಲಕಂಬ ಹಾಗೂ ವಿವಿಧ ಕಸರತ್ತು ಸೇರಿದಂತೆ ಸುಮಾರು ಎರಡೂವರೆ ಗಂಟೆಗಳ ಕಾಲ ವಿದ್ಯಾರ್ಥಿಗಳು ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಪ್ರಕಟನೆಯಲ್ಲಿ ತಿ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬಸ್ರೂರು ನಿವೇದಿತಾ ಪ್ರೌಢಶಾಲೆ ಆವರಣ ಹಾಗೂ ಶ್ರೀ ದೇವಿ ದೇವಸ್ಥಾನದ ಬಳಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.

 

Related Articles

error: Content is protected !!