ಮುದ್ರಾಡಿ : ನಮ ತುಳುವೆರ್ ಕಲಾ ಸಂಘಟನೆ ರಿಜಿಸ್ಟರ್ (ರಿ) ನಾಟ್ಕದೂರು ಮುದ್ರಾಡಿಯಲ್ಲಿ ನಡೆದ ಸುವರ್ಣ ಕರ್ನಾಟಕ ರಂಗೋತ್ಸವ ನಾಟಕ ಯಕ್ಷಗಾನ,ತಾಳಮದ್ದಳೆ 50 ದಿನಗಳ ರಂಗೋತ್ಸವ ಕಾರ್ಯಕ್ರಮದಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮಾ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ಕೃಷ್ಣಾರ್ಜುನ ಕಾಳಗ ತಾಳಮದ್ದಳೆ ಪ್ರದರ್ಶನ ನೀಡಿದರು. ತಾಳಮದ್ದಳೆಯ ನಿರ್ದೇಶನವನ್ನು ಸಂಸ್ಥೆಯ ಕನ್ನಡ ಗುರೂಜಿ ಮಹೇಶ್ ಹೈಕಾಡಿ ನಿರ್ವಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಆಳ್ವಾಸ್ ಎಜುಕೇಶನ್ ಟ್ರಸ್ಟ್ ಮೂಡಬಿದ್ರೆ , ಅಮೃತ ಭಾರತಿ ಟ್ರಸ್ಟ್ ಹೆಬ್ರಿ, ಎಸ್. ಆರ್ .ಗ್ರೂಪ್ ಆಫ್ ಎಜುಕೇಶನ್ ಟ್ರಸ್ಟ್ ಹೆಬ್ರಿ ಇವರ ಸಹಕಾರದೊಂದಿಗೆ ನಮ ತುಳುವೆರ್ ಕಲಾ ಸಂಘಟನೆ ( ರಿ )ನಾಟ್ಕದೂರು ಮುದ್ರಾಡಿ ಆಶ್ರಯದಲ್ಲಿ ನಡೆದ 50 ದಿನಗಳ ಸುವರ್ಣ ಕರ್ನಾಟಕ ರಂಗೋತ್ಸವ ಕಾರ್ಯಕ್ರಮದಲ್ಲಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳು ತಾಳಮದ್ದಳೆ ಪ್ರದರ್ಶನವನ್ನು ನೀಡಿ ಎಲ್ಲರಿಂದಲೂ ಮೆಚ್ಚುಗೆಯನ್ನು ಗಳಿಸಿಕೊಂಡರು.
ತಾಳಮದ್ದಳೆಯ ಹಿಮ್ಮೇಳದಲ್ಲಿ ಪಿ.ವಿ. ಆನಂದ ಸಾಲಿಗ್ರಾಮ ಭಾಗವತಿಕೆಯನ್ನು ಮಾಡಿದರು. ತಾಳಮದ್ದಳೆಯಲ್ಲಿ ಪಾತ್ರಾಧಾರಿ ವಿದ್ಯಾರ್ಥಿಗಳಿಗೆ , ನಿರ್ದೇಶನವಿತ್ತವರಿಗೆ ಅಧ್ಯಕ್ಷರು ನಮ ತುಳುವೆರ್ ಕಲಾ ಸಂಘಟನೆ ( ರಿ ) ನಾಟ್ಕದೂರು ಮುದ್ರಾಡಿ ಶ್ರೀ . ಸುಕುಮಾರ ಮೋಹನ್ ಇವರು ಶಾಲು ಹೊದಿಸಿ ಗೌರವಿಸಿದರು.