ಕುಂಭಾಸಿ : ಆನೆಗುಡ್ಡೆ ಶ್ರಿ ವಿನಾಯಕದ ದೇವಸ್ಥಾನದ ವತಿಯಿಂದ 73 ಮಂದಿ ಅಶಕ್ತರಿಗೆ ಒಟ್ಟು 25 ಲಕ್ಷಕ್ಕೂ ಅಧಿಕ ಮೊತ್ತದ ಸಹಾಯಧನವನ್ನು ವಿತರಿಸಲಾಯಿತು ಶನಿವಾರ ದೇವಳದ ಶ್ರೀ ಸತ್ಯನಾರಾಯಣ ಸಭಾ ಮಂಟಪದಲ್ಲಿ ಜರುಗಿದ ಕಾಠ್ಯಕ್ರಮದಲ್ಲಿ ದೇವರ ಪ್ರಸಾದದೊಂದಿಗೆ ಅಶಕ್ತರಿಗೆ ಆಡಳಿತ ಧರ್ಮದರ್ಶಿಗಳಾದ ಕೆ ಶ್ರೀರಮಣ ಉಪಾಧ್ಯಾಯ ಕಾಠ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿ ವರ್ಷ ಎರಡು ಬಾರಿ ಈ ವೈದ್ಯಕೀಯ ನೆರವನ್ನು ದೇವಳದಿಂದ ನೀಡಲಾಗುತ್ತಿದೆ.
ಮೊದಲು 5 ಸಾವಿರ ರೂ.ನೀಡುತ್ತಿದ್ದುದ್ದನ್ನು ಇದೀಗ 10 ಸಾವಿರಕ್ಕೆ ಏರಿಕೆ ಮಾಡಿ ಅಶಕ್ತರಿಗೆ ಶ್ರೀ ಕ್ಷೇತ್ರದಿಂದ ಪ್ರಸಾದ ರೂಪದಲ್ಲಿ ಈ ಸಹಾಯ ಧನವನ್ನು ವಿತರಿಸಲಾಗುತ್ತಿದೆ. ದೇವರ ಅನುಗ್ರಹದಿಂದ ಶೀಘ್ರವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡು ಉಲ್ಲಾಸದ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ ಸೂರ್ಯನಾರಾಯಣ ಉಪಾಧ್ಯಾಯರು ಫಲಾನುಭವಿಗಳಿಗೆ ಚೆಕ್ ವಿತರಿಸಿದರು ದೇವಳದ ಸಿಬ್ಬಂದಿ ರಾಜಾರಾಮ್ ಉಪಾಧ್ಯಾಯ ಸ್ವಾಗತಿಸಿ ವಿಶ್ವನಾಥ್ ಐತಾಳ್ ಕಾಠ್ಯಕ್ರಮ ನಿರೂಪಿಸಿದರು ದೇವಳದ ವ್ಯವಸ್ಥಾಪಕ ನಟೇಶ್ ಕಾರಂತ್ ವಂದಿಸಿದರು.