ಕುಂಭಾಸಿ : ಕುಂಭಾಸಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಹೈದರಾಬಾದಿನ ಶ್ರೇಷ್ಠ ಕ್ರಿಕೆಟಿಗ ವಿ. ವಿ. ಎಸ್. ಲಕ್ಷ್ಮಣ್ ಹಾಗೂ ಕುಟುಂಬದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇಗುಲದ ಆಡಳಿತ ಧರ್ಮದರ್ಶಿಗಳಾದ ಶ್ರೀಯುತ ಕೆ. ಶ್ರೀರಮಣ ಉಪಾಧ್ಯಾಯರು ವಿ. ವಿ. ಎಸ್. ಲಕ್ಷ್ಮಣ್ ರವರನ್ನು ಸ್ವಾಗತಿಸಿ ಗೌರವಿಸಿದರು. ಪರ್ಯಾಯ ಅರ್ಚಕ ಶ್ರೀ ಕೆ. ಕೃಷ್ಣಾನಂದ ಉಪಾಧ್ಯಾಯ ಸಹೋದರರು ದೇವರ ಪ್ರಸಾದ ನೀಡಿ ಆಶೀರ್ವದಿಸಿದರು. ವ್ಯವಸ್ಥಾಪಕ ನಟೇಶ್ ಕಾರಂತ್ ಹಾಗೂ ದೇಗುಲದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.