Home » ಆನೆಗುಡ್ಡೆ ದೇಗುಲದಲ್ಲಿ ಕೊಳಲು ವಾದನ
 

ಆನೆಗುಡ್ಡೆ ದೇಗುಲದಲ್ಲಿ ಕೊಳಲು ವಾದನ

by Kundapur Xpress
Spread the love

ಕೋಟ : ಇತ್ತೀಚಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ವಿಭಿನ್ನ ರಾಗಗಳನ್ನು ಒಂದು ನಿಮಿಷದಲ್ಲಿ ನುಡಿಸಿ ದಾಖಲೆ ನಿರ್ಮಿಸಿದ ಮಾಸ್ಟರ್ ಶಾಮ್ ಜಿ.ಎನ್. ಪೂಜಾರಿ ಗಂಗೊಳ್ಳಿ ಇವರು ಸೇವಾರ್ಥವಾಗಿ  ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿಯಲ್ಲಿ ತನ್ನ ಕೊಳಲು ವಾದನದ ಮೂಲಕ ಸೇವೆಯನ್ನು ನೀಡಿದರು. ಈ ಕಾರ್ಯದಲ್ಲಿ ಶಶಿಕಿರಣ್ ಆಚಾರ್ ಇವರು ತಬಲದಲ್ಲಿ ಸಹಕರಿಸಿದರು.
ದೇಗುಲದ ಆಡಳಿತ ಧರ್ಮದರ್ಶಿ ಕೆ ಶ್ರೀರಮಣ ಉಪಾಧ್ಯಾಯರು ಅವರಿಗೆ ಶ್ರೀದೇವಳದ ವತಿಯಿಂದ ಗೌರವಿಸಿ, ಪ್ರಸಾದ ನೀಡಿದರು.

 

Related Articles

error: Content is protected !!