ಆನೆಗುಡ್ಡೆ : 25 ಡಿಸೆಂಬರ್ 2025 ನೇ ಗುರುವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ತಾಲೂಕು ಮಟ್ಟದ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಬೆಳಿಗ್ಗೆ 8:00ಗಂಟೆಗೆ ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಶ್ರೀ ಕೆ.ಸೂರ್ಯನಾರಾಯಣ ಉಪಾಧ್ಯಾಯರು ಆನೆಗುಡ್ಡೆ ಸ್ವಾಗತ ಗೋಪುರದಿಂದ ಭವ್ಯಶೋಭಯಾತ್ರೆಗೆ ಚಾಲನೆ ನೀಡಿದರು.
ತನ್ಮೂಲಕ ಉಡುಪಿಯ ಆದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀ ಪಾದಂಗಳವರನ್ನು ಈ ಭವ್ಯ ಮೆರವಣಿಗೆಯ ಮೂಲಕ ಪರ್ಯಾಯ ಅರ್ಚಕರಾದ ಶ್ರೀ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಆನೆಗುಡ್ಡೆ ದೇವಸ್ಥಾನಕ್ಕೆ ಸ್ವಾಗತಿಸಲಾಯಿತು.
ಶ್ರೀಗಳು ಶ್ರೀ ದೇವರಿಗೆ ವಿಶೇಷ ಮಂಗಳಾರತಿ ನೆರವೇರಿಸಿದರು. ದೇವಳದ ವತಿಯಿಂದ ಆಡಳಿತ ಧರ್ಮದರ್ಶಿ ಶ್ರೀ ಕೆ ಶ್ರೀ ರಮಣ ಉಪಾಧ್ಯರು ಫಲಕಾಣಿಕೆಯನ್ನು ನೀಡಿ ಸ್ವಾಮಿಗಳನ್ನು ಸಭಾ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.
ದೀಪ ಪ್ರಜ್ವಲನೆ ಮೂಲಕ ಶ್ರೀಗಳು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಿಬಿರಾರ್ಥಿಗಳಿಗೆ ಆಶೀರ್ವದಿಸಿದರು.
ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಧಾರ್ಮಿಕ ಮುಖಂಡರಾದ ಮಲ್ಯಾಡಿ ಶ್ರೀ ಶಿವರಾಮ ಶೆಟ್ಟಿ, ಶೇಟ್ ಜುವೆಲರ್ಸ್ ನ ಶ್ರೀ ಪ್ರಶಾಂತ್ ಶೆಟ್, ಉದ್ಯಮಿಗಳಾದ ದಿನೇಶ್ ಹೆಗಡೆ ಮೊಳಹಳ್ಳಿ, ಆನಂದ್ ಸಿ.ಕುಂದರ್, ಶ್ರೀರಾಮ ಕೋಟಿಲಿಂಗೇಶ್ವರ ಕಲಾಸಂಘದ ಅದ್ಯಕ್ಷರಾದ ಶ್ರೀ ಬಿ.ಜಿ. ಸೀತಾರಾಮ ಧನ್ಯ, ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಪೂಜಾರಿ, ರಥಶಿಲ್ಪಿಗಳಾದ ಶ್ರೀ ಕೋಟೇಶ್ವರ ರಾಜಗೋಪಾಲ್ ಆಚಾರ್ಯ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿಗಳಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಭಜನಾ ಶಿಬಿರದ ಹಲವು ಪ್ರಮುಖರಿಗೆ ಶ್ರೀದೇವಳದ ವತಿಯಿಂದ ಸ್ಮರಣಿಕೆ ಹಾಗೂ ಪ್ರಸಾದವನ್ನು ನೀಡುವುದರ ಮೂಲಕ ಗೌರವಿಸಲಾಯಿತು.
ಐವತ್ತಕ್ಕೂ ಹೆಚ್ಚಿನ ಕಿರಿಯ ಹಾಗೂ ಹಿರಿಯ ಭಜನಾ ತಂಡದ ಶಿಬಿರಾರ್ಥಿ ಗಳಿಂದ ಪ್ರಾತ್ಯಕ್ಷಿತೆ, ಕುಣಿತ ಹಾಗೂ ಕುಳಿತು ಭಜನಾ ಮಂಗಲೋತ್ವವ ನೆರವೇರುವುದರೊಂದಿಗೆ ಕಾರ್ಯಕ್ರಮವು ಸುಸಂಪನ್ನಗೊಂಡಿತು

