Home ಕರಾವಳಿ ಸುದ್ದಿಅಕ್ರಮ ಅಕ್ಕಿ ಸಾಗಾಟ ಪತ್ತೆ

ಅಕ್ರಮ ಅಕ್ಕಿ ಸಾಗಾಟ ಪತ್ತೆ

by Kundapur Xpress

ಕುಂದಾಪುರ: ಕುಂದಾಪುರ ನಗರದಲ್ಲಿ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕರಾದ ಸುರೇಶ್ ಎಚ್‌.ಎಸ್.ರವರು ಕುಂದಾಪುರ ಠಾಣಾ ಪಿಎಸ್‌ಐ ವಿನಯ್‌ ಮತ್ತು ಸಿಬ್ಬಂದಿಗಳ ಸಹಾಯದಿಂದ ದಾಳಿ ನಡೆಸಿದ್ದಾರೆ ಸಂಗಮ್ ಜಂಕ್ಷನ್‌ನಲ್ಲಿ ಗೂಡ್ಸ್‌ ವಾಹನ ಅಡ್ಡಗಟ್ಟಿ ಪರಿಶೀಲಿಸಿದಾಗ ಅಕ್ರಮ ಅಕ್ಕಿ ಸಾಗಾಟ ಬೆಳಕಿಗೆ ಬಂದಿದೆ. ವಾಹನದಲ್ಲಿ 6 ಪಾಲಿಥಿನ್‌ ಬ್ಯಾಗ್‌ ಗಳಲ್ಲಿ  ಅಕ್ಕಿ ತುಂಬಿಸಿದ್ದು ವಾಹನ ಚಾಲಕ ಕೃಷ್ಣ ಅವರನ್ನು ವಿಚಾರಿಸಿದಾಗ ಸರಕಾರದ ಅನ್ನಭಾಗ್ಯ ಯೋಜನೆಯ ಬೆಳ್ತಿಗೆ ಅಕ್ಕಿಯನ್ನು ಖಾರ್ವಿಕೇರಿಯ ಆಸುಪಾಸು ಮನೆಗೆಳಲ್ಲಿ ಸಂಗ್ರಹಿಸಿ ಯಾವುದೇ ಪರವಾನಿಗೆ ಇಲ್ಲದೇ ಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಒಟ್ಟು 200 ಕೆಜಿ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ

Related Articles