ಕುಂದಾಪುರ : ಶ್ರೇಯಾ ಪ್ರಾಥಮಿಕ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಗೆಳಯರ ಬಳಗ ರಿ.ಆನಗಳ್ಳಿ ಇವರ ಸಭಾಭವನದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಂಜು ಬಿಲ್ಲವ ವಹಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹರೀಶ ಪೂಜಾರಿ ಆರ್ಥಿಕ ವರ್ಷದ ವರದಿ ಮಂಡಿಸಿ ಸಂಘದ ಪಾಲು ಬಂಡವಾಳ 26.39 ಲಕ್ಷ, ಠೇವಣಿ 5.95 ಕೋಟಿ ರೂ, ನಿಧಿಗಳು 5.77 ಲಕ್ಷ, ಹೊರಬಾಕಿ ಸಾಲಗಳು 3.84 ಕೋಟಿ ರೂ ಹೊಂದಿ,ವರದಿ ಸಾಲಿನಲ್ಲಿ 27.30 ಕೋಟಿ ರೂ.ನಷ್ಟು ವ್ಯವಹಾರ ನಡೆಸಿ, 5.80 ಲಕ್ಷ ನಿವ್ವಳ ಲಾಭ ಗಳಿಸಿದೆ, ಇದರಲ್ಲಿ ಸದಸ್ಯರಿಗೆ ಶೇ.6 ಡಿವಿಡೆಂಡ್ ನೀಡಲಾಗುವುದು ಎಂದರು.
ಸಂಘದ ವತಿಯಿಂದ ಶಾಲೆಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಿಸಲಾಯಿತು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸೂರ ಪೂಜಾರಿ ಮತ್ತು ನಿರ್ದೇಶಕರಾದ ಆನಂದ ಬಿಲ್ಲವ, ಆರ್.ಅಶ್ವತ್, ಶಿವರಾಮ ಪೂಜಾರಿ, ರಾಜು ಪೂಜಾರಿ, ಹೆಚ್.ದುಂಢಿರಾಜ್, ಸುಧೀರ ಕೆ.ಎಸ್, ತೇಜರಾಜ ಶೆಟ್ಟಿ, ಶ್ರೀಮತಿ ಅನಿತಾ ಕರ್ವಾಲ್ಲೋ ಹಾಗೂ ಶ್ರೀಮತಿ ಸುರೇಖಾರವರು ಉಪಸ್ಥಿತರಿದ್ದರು.ನಿರ್ದೇಶಕರಾದ ಸುಧೀರ ಕೆ ಎಸ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರಿಗೂ ಪಾರಿತೋಷಕ ನೀಡಿ ಗೌರವಿಸಲಾಯಿತು.