ಕೋಟ : ಜಮ್ಮು ಕಾಶ್ಮೀರ ಇಲ್ಲಿ ಲ್ಯಾನ್ಸ್ ಹವಾಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ವಾಹನ ರಸ್ತೆ ಅಪಘಾತಕ್ಕೆ ಒಳಗಾಗಿ ಮೃತರಾದ ಕೋಟ,ವಿವೇಕ ವಿದ್ಯಾ ಸಂಸ್ಥೆಯ ಹಿಂದಿನ ಹೆಮ್ಮೆಯ ವಿದ್ಯಾರ್ಥಿ ಯೋಧ ಅನುಪ್ ಪೂಜಾರಿ ಬಿಜಾಡಿ ಅವರ ಪಾರ್ಥಿವ ಶರೀರ ಅವರ ಸ್ವಗ್ರಾಮಕ್ಕೆ ತೆರುಳುವ ಸಂದರ್ಭದಲ್ಲಿ ವಿವೇಕ ವಿದ್ಯಾ ಸಂಸ್ಥೆಯ ಮುಂಭಾಗದಲ್ಲಿ ಅವರ ಪಾರ್ಥಿವ ಶರೀರಕ್ಕೆ ನಮನವನ್ನು ಸಲ್ಲಿಸಲಾಯಿತು. ತದನಂತರ ನಡೆದ ಸಭೆಯಲ್ಲಿ ಸಂಸ್ಥೆಯ ಮುಖ್ಯ ವೇದಿಕೆಯಲ್ಲಿ ವಿದ್ಯಾಸಂಸ್ಥೆ ಸಿಬ್ಬಂದಿಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳು ಸಭೆ ಸೇರಿ ಅವರ ಭಾವಚಿತ್ರಕ್ಕೆ ನಮನವನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ ಮಾತನಾಡಿ ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸ್ಮರಿಸಿಕೊಂಡು ಅವರ ತ್ಯಾಗವನ್ನು , ಭಾರತಮಾತೆಯ ಸೇವೆಯನ್ನು ಶ್ಲಾಘಿಸಿದರು. ಸಂಸ್ಥೆಯ ಮುಖ್ಯಸ್ಥ ಜಗದೀಶ ಹೊಳ್ಳ,ಪ್ರೀತಿ ರೇಖಾ, ವೆಂಕಟೇಶ ಉಡುಪ ಉಪಸ್ಥಿತರಿದ್ದರು.