ಕೋಟ : ದೇಶ ಕಾಯುವ ಕಾಯಕಜೀವಿ ವೀರಯೋಧ ಅನೂಪ್ ಪೂಜಾರಿ ಗಡಿಕಾಯುವ ಸಂದರ್ಭ ರಸ್ತೆ ಅಪಘಾತವೊಂದರಲ್ಲಿ ಸೇನಾ ಟ್ರಕ್ ಪಲ್ಟಿಯಾಗಿ ಸಾವನ್ನಪ್ಪಿದ್ದು ಈ ಹಿನ್ನಲ್ಲೆಯಲ್ಲಿ ಹುಟ್ಟೂರು ಉಡುಪಿ ಜಿಲ್ಲೆಯ ಬೀಜಾಡಿ ಆಗಮಿಸುವ ಸಂದರ್ಭದ ಮಾರ್ಗದಲ್ಲಿ ಕೋಟ ಅಮೃತೇಶ್ವರಿ ಸರ್ಕಲ್ ಬಳಿ ಬಾರಿ ಪ್ರಮಾಣದಲ್ಲಿ ಸಾರ್ವಜನಿಕರು ಅವರ ಮೃತದೇಹಕ್ಕೆ ಪುಷ್ಭನಮನ ಸಲ್ಲಿಸಿದರು.
ಕೋಟ ಅಮೃತೇಶ್ವರಿ ದೇಗುಲದ ಸನಿಹದ ರಾಷ್ಟಿçÃಯ ಹೆದ್ದಾರಿಯಲ್ಲಿ ಆಗಮಿಸುತ್ತಿದ್ದಂತೆ ಭಾರತ್ ಮಾತಾಕೀ ಜೈ ವೀರಯೋಧನಿಗೆ ಜೈಕಾರ ಘೋಷಣೆಗಳು ಬಾನಂಗಳನ್ನು ಕ್ರಮಿಸಿಕೊಂಡಿತು.ಸಾಸ್ತಾನದ ಮಾಬುಕಳ,ಬಸ್ ನಿಲ್ದಾಣ ಸಾಸ್ತಾನ,ಸಾಲಿಗ್ರಾಮ,ಕೋಟ ಹೈಸ್ಕೂಲ್ ಸರ್ಕಲ್,ತೆಕ್ಕಟ್ಟೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ವಿವಿಧ ಬಗೆಯ ಪುಷ್ಭಗಳು ಮೃತದೇಹವಿದ್ದ ವಾಹನಕ್ಕೆ ಸಿಂಚನಗೈದು, ಸೆಲ್ಯೂಟ್ ನೀಡಿ ಗೌರವ ಸಲಿಸಿದರು
ಹುಟ್ಟೂರು ಉಡುಪಿ ಜಿಲ್ಲೆಯ ಬೀಜಾಡಿ ಆಗಮಿಸುವ ಸಂದರ್ಭದ ಮಾರ್ಗದಲ್ಲಿ ಕೋಟ ಅಮೃತೇಶ್ವರಿ ಸರ್ಕಲ್ ಬಳಿ ಬಾರಿ ಪ್ರಮಾಣದಲ್ಲಿ ಸಾರ್ವಜನಿಕರು ಅವರ ಮೃತದೇಹಕ್ಕೆ ಪುಷ್ಭನಮನ ಸಲ್ಲಿಸಿದರು. ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ,ಕಾರ್ಕಳದ ಶಾಸಕ ಸುನೀಲ್ ಕುಮಾರ್ ಭಾಗಿಯಾದರು.