166
ಉಡುಪಿ : ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣಮಠದ ವತಿಯಿಂದ ಮೈಸೂರಿನ ಚಂಪಕ ಅಕಾಡೆಮಿಯ ವಿದುಷಿ ಡಾ.ನಾಗಲಕ್ಷ್ಮಿ ನಾಗರಾಜನ್ ಮತ್ತು ಶಿಷ್ಯವೃಂದದಿಂದ ಗೇಯ ನೃತ್ಯ ರೂಪಕ ಶ್ರೀಕೃಷ್ಣ ಲೀಲಾ ವಿಭೂತಿ ಪ್ರದರ್ಶನ ಜು.28ರಂದು ಸಂಜೆ 6.45ಕ್ಕೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. ಪದ್ಮಭೂಷಣ ಡಿ.ವಿ.ಗುಂಡಪ್ಪ ರಚಿತ ಶ್ರೀಮದ್ ಭಾಗವತ ಕಥಾಸಾರ ಆಧರಿತ ಪ್ರದರ್ಶನಕ್ಕೆ ವಿದುಷಿ ಚೇತನಾ ನಾಗರಾಜ್ ಸಂಗೀತ ಸಂಯೋಜನೆ ಮತ್ತು ಗಾಯನ, ವಿದ್ವಾನ್ ಗಣೇಶ್ ಕೆ. ಎಸ್. (ಕೊಳಲು), ವಿದ್ವಾನ್ ಕಿರಣ್ (ಮೃದಂಗ), ವಿದುಷಿ ಪಾವನಾ(ಗಮಕ ಮತ್ತು ಸಂಭಾಷಣೆ) ಸಹಕರಿಸಲಿದ್ದಾರೆ

