Home » ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
 

ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

by Kundapur Xpress
Spread the love

ಉಡುಪಿ : ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋದ 7 ಲಕ್ಷ ರೂ. ಮೌಲ್ಯದ ಚೆಕ್‌ ಹಾಗೂ ಅಮೂಲ್ಯ ದಾಖಲೆ ಪತ್ರಗಳನ್ನು ರಿಕ್ಷಾ ಚಾಲಕ ಮಣಿಪಾಲ ಠಾಣಾ ಪೊಲೀಸರ ಸಮ್ಮುಖದಲ್ಲಿ ಮಾಲಕರಿಗೆ ಹಿಂತಿರುಗಿಸಿದ ಘಟನೆ ನಡೆದಿದೆ

ಮಣಿಪಾಲ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರಾದ ಸತೀಶ ಎಂ ಎಂಬವರ ರಿಕ್ಷಾದಲ್ಲಿ ಅನಂತ ದೇವಾಡಿಗರು ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿದ್ದು ಅಮೂಲ್ಯವಾದ ದಾಖಲೆ ಹಾಗೂ ಚೆಕ್‌ ರಿಕ್ಷಾದಲ್ಲಿ ಬಿಟ್ಟಿದ್ದರು

ಸತೀಶ್ ತಮ್ಮ ನಿಲ್ದಾಣಕ್ಕೆ ಮರಳಿ ಬಂದಾಗ ರಿಕ್ಷಾದಲ್ಲಿದ್ದ ದಾಖಲೆ ಪತ್ರಗಳನ್ನು ನೋಡಿದರು ತಕ್ಷಣ ಅವರು ಸಂಘದ ಅಧ್ಯಕ್ಷರಾದ ವಿಜಯ ಪುತ್ರನ್‌ ರವರ ಗಮನಕ್ಕೆ ತಂದಿದ್ದಾರೆ ಮಣಿಪಾಲ ಠಾಣಾಧಿಕಾರಿಯಾದ ದೇವರಾಜ್ ಹಗೂ ಪಿಎಸ್ಐ ಅಕ್ಷಯ್ ಕುಮಾರ್ ಇವರ ಸಮ್ಮುಖದಲ್ಲಿ ಚೆಕ್ ಹಾಗೂ ಅಮೂಲ್ಯವಾದ ದಾಖಲೆಗಳನ್ನು ಅನಂತದೇವಾಡಿಗ ಇವರಿಗೆ ಹಸ್ತಾಂತರಿಸಲಾಯಿತು

   

Related Articles

error: Content is protected !!