ಕೋಟ: ಇಲ್ಲಿನ ಸಾಲಿಗ್ರಾಮದ ಪಾರಂಪಳ್ಳಿ ನಾದಾಮೃತ ಯಕ್ಷ ಬಳಗದ ಪ್ರತಿವರ್ಷ ನೀಡುತ್ತಾ ಬಂದಿರುವ ಬಡಗುತಿಟ್ಟಿನ ಶ್ರೇಷ್ಠ ಭಾಗವತ ದಿ.ನಗರ ಸುಬ್ರಹ್ಮಣ್ಯ ಆಚಾರ್ ಪ್ರಶಸ್ತಿಯನ್ನು ಈ ಬಾರಿ ಪ್ರಸಿದ್ಧ ಮದ್ದಲೆ ವಾದಕ ಸುಬ್ರಾಯ ನಾರಾಯಣ ಭಂಡಾರಿ ಗುಣವಂತೆ ಇವರಿಗೆ ಪ್ರದಾನಿಸಲಿದೆ.
ಸುಬ್ರಾಯ ನಾರಾಯಣ ಭಂಡಾರಿ ಗುಣವಂತೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಮದ್ದಲೆಯನ್ನು ಕಲಿತು,ಮರವಂತೆ ನರಸಿಂಹ ದಾಸರು,ನಾರಣಪ್ಪ ಉಪ್ಪೂರರು,ಕಾಳಿಂಗ ನಾವುಡರು,ಧಾರೇಶ್ವರರಂತಹ ಅಗ್ರಗಣ್ಯ ಭಾಗವತರಿಗೆ ಸಮರ್ಥ ಮದ್ದಲೆವಾದಕರಾಗಿ, ಬಚ್ಚಗಾರು,ಮಾರಣಕಟ್ಟೆ,ಮಂದಾರ್ತಿ,ಅಮೃತೇಶ್ವರಿ,ಕಮಲಶಿಲೆ,ಗುಂಡಬಾಳ ಮುಂತಾದ ಮೇಳಗಳಲ್ಲಿ 40 ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ನಿವೃತ್ತ ಜೀವನ ಸಾಗಿಸುತ್ತಿರುವ, ಸುಬ್ರಾಯ ನಾರಾಯಣ ಭಂಡಾರಿ ಗುಣವಂತೆ ಇವರಿಗೆ, ದಿ.ನಗರ ಸುಬ್ರಹ್ಮಣ್ಯ ಆಚಾರ್ ಹೆಸರಿನ 4ನೇ ವರ್ಷದ ಪ್ರಶಸ್ತಿಯನ್ನು, ನೀಡಲಿದ್ದು ಇದೇ ಮೇ.25ರಂದು ಅವರ ಸ್ವಗೃಹದಲ್ಲಿ ಪ್ರಶಸ್ತಿ ಪ್ರದಾನಿಸಲಿದೆ.ಈ ಪ್ರಶಸ್ತಿಯು 10,000 ನಗದನ್ನು ಒಳಗೊಂಡಿದೆ ಎಂದು ನಾದಾಮೃತ ಯಕ್ಷ ಬಳಗದ ಮುಖ್ಯಸ್ಥ ಯಲಾಪುರ ರಾಘವೇಂದ್ರ ಹೆಗಡೆ ತಿಳಿಸಿದ್ದಾರೆ.