ಆಯೋಧ್ಯೆ : ಚೈತ್ರ ರಾಮನವಮಿ ದಿನವಾದ ಏ.17ರಂದು ಶ್ರೀರಾಮ ಮಂದಿರದಲ್ಲಿ ಮಂಗಳ ಆರತಿ ನಂತರ ಅಭಷೇಕ ಶೃಂಗಾರ ಮತ್ತು ದರ್ಶನವು ಬ್ರಾಹ್ಮಿ ಮುಹೂರ್ತ 3.30ರಿಂದ ಏಕಕಾಲದಲ್ಲಿ ನಡೆಯಲಿದೆ. ರಾಮಲಲಾನ ದರ್ಶನವು ರಾತ್ರಿ 11 ಗಂಟೆವರೆಗೆ ನಿರಂತರವಾಗಿ ಸುಮಾರು 20 ತಾಸು ಮುಂದುವರಿಯಲಿದೆ. ಅಂದು ಮುಂಜಾನೆ 5 ಗಂಟೆಗೆ ಶೃಂಗಾರ ಆರತಿ ನಡೆಯಲಿದ್ದು ರಾಮಲಲಾ ದರ್ಶನ ಮತ್ತು ಎಲ್ಲಾ ಪೂಜಾ ವಿಧಿವಿಧಾನಗಳು ಏಕಕಾಲದಲ್ಲಿ ಜರುಗಲಿವೆ. ಭೋಗ್ (ನೈವೇದ್ಯ) ಮತ್ತು ಶಯನ ಆರತಿಯನ್ನು ಸಂದರ್ಭಕ್ಕೆ ಅನುಗುಣವಾಗಿ ಮಾಡಲಾಗುತ್ತದೆ. ದೇವರಿಗೆ ನೈವೇದ್ಯ ಸಮರ್ಪಿಸಲು ಕಾಲಕಾಲಕ್ಕೆ ಕೆಲ ಸಮಯ ಗರ್ಭಗೃಹದ ಪರದೆ ಎಳೆಯಲಾಗುತ್ತದೆ