Home » ಶ್ರೀರಾಮನಿಗೆ ಸೂರ್ಯರಶ್ಮಿಯ ತಿಲಕ
 

ಶ್ರೀರಾಮನಿಗೆ ಸೂರ್ಯರಶ್ಮಿಯ ತಿಲಕ

by Kundapur Xpress
Spread the love

ಅಯೋಧ್ಯೆ : ಭಾರತದ ಇತಿಹಾಸದಲ್ಲಿ 2024ರ ರಾಮನವಮಿಯು ‘ಒಂದು ಮಹತ್ವದ ಸಂದರ್ಭವಾಗಿ ದಾಖಲಿಸಿಕೊಂಡಿದೆ. ಜನ್ಮಭೂಮಿ ಮಂದಿರದಲ್ಲಿನ ರಾಮಲಲಾನ ಹಣೆಯನ್ನು ಸೂರ್ಯ ರಶ್ಮಿಯು ಸ್ಪರ್ಶಿಸಿತು.

ಕಳೆದ 496 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಮಜನೋತ್ಸವವನ್ನು ಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪಿಸಿದ ರಾಮಲಲಾನೊಂದಿಗೆ ಆಚರಿಸಲಾಯಿತು. ಅಲ್ಲದೆ, ಸೂರ್ಯವಂಶಿಯಾಗಿರುವ ರಾಮಲಲಾನ ಹಣೆಯನ್ನು ಸೂರ್ಯ ತಿಲಕದಿಂದ ಬೆಳಗಿಸಲಾಯಿತು.

ಮಂದಿರದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಈ ಕೌತುಕಕ್ಕೆ ಸಾಕ್ಷಿಯಾದರೆ, ಕೋಟ್ಯಂತರ ಮಂದಿ – ನೇರ ಪ್ರಸಾರ ಮೂಲಕ ಈ ಅಪೂರ್ವ ಶ್ರೀರಾಮನವಮಿ ಸಂಭ್ರಮ ಕ್ಷಣಗಳನ್ನು ಕಣ್ಣುಂಬಿಕೊಂಡರು. ಮಂಗಳವಾರ ರಾತ್ರಿಯಿಂದಲೇ ರಾಮ ನಗರಿ ಅಯೋಧ್ಯೆಗೆ ರಾಮಭಕ್ತರ ದಂಡು ಬರಲಾರಂಭಿಸಿತ್ತು. ಬುಧವಾರ ಮುಂಜಾವ 3ಗಂಟೆಗೆ ಬ್ರಾಡ್ಮಿ ಮುಹೂರ್ತದಲ್ಲಿ ರಾಮಲಲಾಗೆ ಮಂಗಳ ಆರತಿಯ ಬಳಿಕ 3.30ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಲಾಯಿತು. ಪ್ರಾಣಪ್ರತಿಷ್ಠೆಯ ಬಳಿಕ ಇದೇ ಮೊದಲ ಬಾರಿಗೆ ರಾಮಲಲಾಗೆ ಪಂಚಾಮೃತ ಅಭಿಷೇಕ, ಶೃಂಗಾರ ಆರತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಭಕ್ತರು ನೋಡುವುದಕ್ಕೆ ಸಾಧ್ಯವಾಯಿತು. ರಾಮಲಲಾಗೆ ಗಂಧೋದಕ, ಸುಗಂಧದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು

   

Related Articles

error: Content is protected !!