ಮಾರ್ಚ್ : ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಪತ್ತು ಸೃಷ್ಟಿ ಅವಕಾಶಗಳು ಎನ್ನುವ ವಿಷಯದ ಕುರಿತು ಸಿಬ್ಬಂದಿ ವಿಕಸನ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎನ್ವಿಸ್ಟ ಫೈನಾನ್ಸಿಯಲ್ ಸರ್ವಿಸ್ ಮಂಗಳೂರು ಇದರ ಸಂಸ್ಥಾಪಕರಾದ ಶ್ರೀ ನಾಗೇಶ್ ಆಚಾರ್ಯರವರು ಸಿಬ್ಬಂದಿಗಳು ತಮ್ಮ ನಿವೃತ್ತಿ ಬದುಕಿನ ಭದ್ರತೆಗೆ ಹಣದ ಸದ್ವಿನಿಯೋಗದ ಜೊತೆಗೆ ಶಿಸ್ತುಬದ್ಧ ರೀತಿಯಲ್ಲಿ ದೀರ್ಘಾವಧಿಯ ಹೂಡಿಕೆ ಮಾಡುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಚೇತನ್ ಶೆಟ್ಟಿ ಕೋವಾಡಿಯವರು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಗಮನದಲ್ಲಿರಿಸಿ ಸಾಂಪ್ರದಾಯಿಕ ಹೂಡಿಕೆಯ ಆಯ್ಕೆಗಳ ಜೊತೆಗೆ ಷೇರು ಮಾರುಕಟ್ಟೆಯ ಅರಿವು ಪಡೆದು ಹೂಡಿಕೆ ಮಾಡುವುದು ಉತ್ತಮ ಎಂದರು.
ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ನಿರ್ಮಲ ಪ್ರಾರ್ಥಿಸಿದರು. ವಾಣಿಜ್ಯ ಉಪನ್ಯಾಸಕ ಸುಧೀರ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ವಿ. ಭಟ್ ವಂದಿಸಿದರು. ವಾಣಿಜ್ಯ ಉಪನ್ಯಾಸಕಿ ಜೋಸ್ಲಿನ್ ಅಲ್ಮೇಡ ಕಾರ್ಯಕ್ರಮ ನಿರೂಪಿಸಿದರು.