Home » ಬಿ. ಬಿ. ಹೆಗ್ಡೆ ಕಾಲೇಜು – ‘ಹಿಂದಿ ಭಾಷ ಮಹತ್ವ’
 

ಬಿ. ಬಿ. ಹೆಗ್ಡೆ ಕಾಲೇಜು – ‘ಹಿಂದಿ ಭಾಷ ಮಹತ್ವ’

by Kundapur Xpress
Spread the love

 ಕುಂದಾಪುರ : ತ್ರಿಭಾಷಾ ಸೂತ್ರದಡಿಯಲ್ಲಿ ಮಾತೃಭಾಷೆ, ರಾಷ್ಟçಭಾಷೆ, ಅಂತರಾಷ್ಟಿçÃಯ ಭಾಷೆ ಇವೆಲ್ಲವೂ ಇಂದಿನ ವಿದ್ಯಾರ್ಥಿಗಳಿಗೆ ಅತಿಮುಖ್ಯ. ಅದರಲ್ಲಿಯೂ ರಾಷ್ಟçಭಾಷೆಯಾದ ಹಿಂದಿ ಪ್ರಪಂಚದ ಪ್ರಾಚೀನ, ಶ್ರೀಮಂತ ಮತ್ತು ಸರಳ ಭಾಷೆಯಾಗಿದ್ದು, ವಿಶ್ವವ್ಯಾಪಿಯಾಗಿ ಸಂವಹನಕ್ಕೆ ಬಳಸುವ ಭಾಷೆಯಾಗಿದೆ. ನಮಗೆ ಸ್ವಾತಂತ್ರ‍್ಯ ತಂದುಕೊಟ್ಟ ರಾಷ್ಟçಭಾಷೆಯ ಮೇಲೆ ವಿದ್ಯಾರ್ಥಿಗಳಿಗೆ ಅಭಿಮಾನವಿರಲಿ ಎಂದು ಉಡುಪಿ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ| ಸುಕನ್ಯಾ ಮೇರಿ ಜೋಸೆಫ್ ಹೇಳಿದರು.

ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗವು ಆಯೋಜಿಸಿದ ‘ಹಿಂದಿ ಭಾಷಾಕಾ ಮಹತ್ವ’ದ ಕುರಿತು ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.   ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದೀಪಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಹಿಂದಿ ಪ್ರಾಧ್ಯಾಪಕಿ ಶ್ರೀಮತಿ ರೇವತಿ ಡಿ. ವಂದಿಸಿದರು. ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ ಪ್ರಾರ್ಥಿಸಿ, ಶ್ರೀನಾಭ ಉಪಾಧ್ಯಾಯ ಸ್ವಾಗತಿಸಿ, ಸಮೃದ್ಧಿ ಕಿಣಿ ಕಾರ್ಯಕ್ರಮ ನಿರೂಪಿಸಿದರು.

   

Related Articles

error: Content is protected !!