Home » ಬಿ ಬಿ ಹೆಗ್ಡೆ ಕಾಲೇಜ್‌ : ಟೆಕ್‌ ಮಂಥನ್
 

ಬಿ ಬಿ ಹೆಗ್ಡೆ ಕಾಲೇಜ್‌ : ಟೆಕ್‌ ಮಂಥನ್

by Kundapur Xpress
Spread the love

ಕುಂದಾಪುರ : ತಂತ್ರಜ್ಞಾನ ಮುಂದುವರಿದ ಈ ಕಾಲಘಟ್ಟದಲ್ಲಿ ಅವುಗಳ ಸದ್ಬಳಕೆಯನ್ನು ಅರಿತು ಬಳಕೆ ಮಾಡಿದಾಗ ಮಾತ್ರ ಅದು ಒಳಿತು ಎಂಬುದನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು ಎಂದು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಸುಣ್ಣಾರಿ ಇಲ್ಲಿನ ಪ್ರಾಂಶುಪಾಲರಾದ ಶ್ರೀ ನಾಗರಾಜ ಶೆಟ್ಟಿ ಹೇಳಿದರು.
ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ವಿಜ್ಞಾನ ವಿಭಾಗ ಆಯೋಜಿಸಿದ ‘ಟೆಕ್‌ಮಂಥನ್ 4.0’ವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಟೆಕ್‌ಮಂಥನ್ ಆಯೋಜಿಸುವಲ್ಲಿ ಶ್ರಮಿಸಿದ ವಿದ್ಯಾರ್ಥಿ ಸಮುದಾಯವನ್ನು ಶ್ಲಾಘಿಸಿದರು.
ಈ ಸಂದರ್ಭ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಶುಭ ಹಾರೈಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶ್ರೀ ಪ್ರಣಮ್ ಆರ್. ಹಾಗೂ ರಶ್ಮಿ ಗಾವಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಭಿಷೇಕ್ ಸ್ವಾಗತಿಸಿ, ಸುಜನ ಅತಿಥಿಗಳನ್ನು ಪರಿಚಯಿಸಿ, ಆಕಾಶ್ ವಂದಿಸಿ, ಸಿಂಚನಾ ನಿರೂಪಿಸಿದರು.

   

Related Articles

error: Content is protected !!