ಕುಂದಾಪುರ : ಎಲ್ಲಾ ಭಾಷೆಗಳಿಗೆ ತಾಯಿಯಾದ ಸಂಸ್ಕ್ರತ ಏಕರೂಪದ ಭಾಷೆ. ಇದು ಯಾವುದೇ ಬದಲಾವಣೆಗೆ ಒಳಗಾಗದೇ ಪಕ್ವವಾದ ಭಾಷೆ. ಭಾರತದ ಸಂಸ್ಕ್ರತಿಯು ಎಷ್ಟು ಮುಖ್ಯವೋ ಸಂಸ್ಕ್ರತ ಭಾಷೆಯೂ ಅಷ್ಟೇ ಮುಖ್ಯ. ಕಾಲ ಬದಲಾದಂತೆ ಉಳಿದ ಸಂಸ್ಕ್ರತಕ್ಕೆ ಅಂತಸತ್ವತೆ ಇದೆ ಎಂದು ಕೋಣಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿದ್ವಾನ್ ಮಾಧವ ಅಡಿಗ ಹೇಳಿದರು.ಇವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಂಸ್ಕøತ ವಿಭಾಗ ಆಯೋಜಿಸಿದ ‘ಸಂಸ್ಕøತೋತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಫ್ರೋ. ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಸಂಸ್ಕøತ ವಿಭಾಗದ ಮುಖ್ಯಸ್ಥ ವಿದ್ವಾನ್ ಗಣೇಶ್ ಭಟ್ ಸ್ವಾಗತಿಸಿ, ಉಪನ್ಯಾಸಕ ಸೂರಜ್ ಹೊಳ್ಳ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಪೂಜಾ ವಂದಿಸಿ, ಸೌಭಾಗ್ಯ ಕಿಣಿ ನಿರೂಪಿಸಿದರು.