ಕುಂದಾಪುರ : ಕಂಡ್ಲೂರು ಮುಖ್ಯ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಜನೌಷಧ ಕೇಂದ್ರ ಉದ್ಘಾಟನೆಗೊಂಡಿತು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ ಉದ್ಘಾಟಿಸಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಔಷಧ ಲಭ್ಯವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಿದೆ. ಇದರ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು’ ಎಂದು ನುಡಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ
ಬಡವರು ದುಬಾರಿ ಬೆಲೆಯ ಔಷದ ಖರೀದಿಸಲು ಆಗುವುದಿಲ್ಲ ಎಂಬ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಜನೌಷದ ಕೇಂದ್ರವನ್ನ ಪ್ರಾರಂಭಿಸಿದ್ದಾರೆ
ಜನೌಷಧ ಕೇಂದ್ರದಲ್ಲಿ ಹಾಗೂ ಇತರ ಔಷಧ ಅಂಗಡಿಗಳಲ್ಲಿ ದೊರೆಯುವ ಔಷಧಿಗಳು ಒಂದೇ ಆಗಿರುತ್ತವೆ. ಬೇರೆ ಬೇರೆ ಹೆಸರು ಹೊಂದಿರುತ್ತವೆ. ಆದ್ದರಿಂದ ಔಷಧ ಅಗತ್ಯ ಇರುವವರು ಈ ಕೇಂದ್ರದ ಲಾಭವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಕ್ ಬಾಯಲ್, ಸಿ.ಇ.ಒ. ಜಿಲ್ಲಾ ಪಂಚಾಯತ್ ಉಡುಪಿ, ಡಾ.ಐ.ಪಿ.ಗಡದ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಡುಪಿ, ಡಾ. ಸುಬ್ರಾಯ ಕಾಮತ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು, ವಾದಿರಾಜ್ ಕೆ. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕರ್ನಾಟಕ ಬ್ಯಾಂಕ್ ಉಡುಪಿ, ಶ್ರೀಮತಿ ನೌಶಿನ್ ಹಜ್ ರತ್, ಸಂತೋಷ್ ಕುಮಾರ್ ಶೆಟ್ಟಿ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಕಾವ್ರಾಡಿ,ಲಿಯಾಕತ್ ಬೆಟ್ಟೆ ಸದಸ್ಯರು ಗ್ರಾಮ ಪಂಚಾಯತ್ ಕಾವ್ರಾಡಿ, ಸದಾನಂದ ಬಳ್ಕೂರು ಅಧ್ಯಕ್ಷರು ಕಾವ್ರಾಡಿ ವ್ಯವಸಾಯನಿಕ ಸಹಕಾರಿ ಸಂಘ 0 ಕಂಡ್ಲೂರು, ವಿಜಯ್ ಪುತ್ರನ್ ಸದಸ್ಯರು ಗ್ರಾಮ ಪಂಚಾಯತ್ ಕಾವ್ರಾಡಿ, ಎ.ಅಶೋಕ್ ಕುಮಾರ್ ಕೊಡ್ಗಿ ಅಧ್ಯಕ್ಷರು ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘ, ಎಚ್ ವಿಟ್ಟಲ್ ಶೆಟ್ಟಿ ಉಪಾಧ್ಯಕ್ಷರು ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘ, ನಿರ್ದೇಶಕ ಮಂಡಳಿಯ ಸದಸ್ಯರಾದ
ಕಟಪಾಡಿ ಶಂಕರ್ ಪೂಜಾರಿ. ಟಿ ಚಂದ್ರಶೇಖರ್ ಶೆಟ್ಟಿ ತೊಂಬಟ್ಟು,ಡಿ. ಬಾಲಕೃಷ್ಣ ಶೆಟ್ಟಿ ಗುಲ್ವಾಡಿ, ಎಸ್ ಅಮರನಾಥ ಚಾತ್ರ ಹಳ್ಳಿಹೊಳೆ, ಎಸ್ ಶಶಿಧರ ಅಲ್ಸೇ ಬೆಳ್ವೆ, ಕೆ ಪ್ರದೀಪ್ ಹೆಬ್ಬಾರ್ ನಂಚಾರು, ಕೆ ಗಣೇಶ್ ಕಾಮತ್ ಕುಂದಾಪುರ, ಬಿ ಭಾಸ್ಕರ್ ಕಾಮತ್, ನಾಗರಾಜ್ ಉಳಿತಾಯ ಚಗ್ರಿಬೆಟ್ಟು, ವರೋನಿಕಾ ಸಲ್ದಾನಾ ಉಡುಪಿ, ಶ್ರೀಮತಿ ವೈದೇಹಿ ಎಸ್ ಉಡುಪಿ,
ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಾಖಾ ವ್ಯವಸ್ಥಾಪಕರು, ಮತ್ತು ಸಿಬ್ಬಂದಿ ವರ್ಗ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.